Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರಾಕ್ತನ ವಿದ್ಯಾರ್ಥಿಗಳಿಂದ ಪುತ್ತಿಗೆ ಶ್ರೀಗಳಿಗೆ ವಾಹನ ಕೊಡುಗೆ

ಪ್ರಾಕ್ತನ ವಿದ್ಯಾರ್ಥಿಗಳಿಂದ ಪುತ್ತಿಗೆ ಶ್ರೀಗಳಿಗೆ ವಾಹನ ಕೊಡುಗೆ

ಉಡುಪಿ: ಪುತ್ತಿಗೆ ಮಠದ ವಿದೇಶಿ ಶಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪುತ್ತಿಗೆ ವಿದ್ಯಾಪೀಠದ ಪ್ರಾಕ್ತನ ವಿದ್ಯಾರ್ಥಿಗಳಿಂದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಷಷ್ಟ್ಯಬ್ಧಿಪೂರ್ತಿ ಕಾರ್ಯಕ್ರಮ ಸಂದರ್ಭದಲ್ಲಿ ಸರ್ವ ಸಜ್ಜಿತ, ಸುಮಾರು 1.25 ಕೋ. ರೂ. ಮೌಲ್ಯದ ವಿಶೇಷ ವಾಹನವೊಂದನ್ನು ಗುರುವಾರ ಕೊಡುಗೆಯಾಗಿ ನೀಡಿದರು.

ವಾಹನವನ್ನು ಪ್ರೀತಿ ವಾತ್ಸಲ್ಯದಿಂದ ಸ್ವೀಕರಿಸಿದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀಮಠದ ಪುತ್ತಿಗೆ ವಿದ್ಯಾಪೀಠದ ಹಳೆವಿದ್ಯಾರ್ಥಿಗಳ ಔದಾರ್ಯ ಹಾಗೂ ಸೇವೆಯನ್ನು ಅಭಿನಂದಿಸಿ, ತಮ್ಮ ಮುಂದಿನ ನಾಲ್ಕನೇ ಪರ್ಯಾಯ ನಿಮಿತ್ತವಾಗಿ ನೀಡಿರುವ ವಾಹನ ಶ್ರೀವಿಠ್ಠಲದೇವರ ರಥೋತ್ಸವದಂತಾಗಲಿ ಎಂದು ಹಾರೈಸಿ, ಎಲ್ಲಾ ವಿದ್ಯಾರ್ಥಿಗಳು ಮತ್ತು ದಾನಿಗಳಿಗೆ ಶುಭ ಹಾರೈಸಿದರು.

ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಭೀಮನಕಟ್ಟೆ ಮಠಾಧೀಶರಾಗಿದ್ದ ಕೀರ್ತಿಶೇಷ ಶ್ರೀ ರಘುಮಾನ್ಯತೀರ್ಥ ಶ್ರೀಪಾದರು ನಡೆಸಿದ್ದ ಮೂವತ್ತೆರಡು ಲಕ್ಷ ಲಕ್ಷ್ಮೀನರಸಿಂಹ ಮಂತ್ರಜಪ ಅಂಗವಾಗಿ ಹೋಮ ಶ್ರೀ ಪುತ್ತಿಗೆ ನರಸಿಂಹದೇವರ ಸನ್ನಿಧಾನದಲ್ಲಿ ಅರ್ಪಣೆ ಮಾಡಲಾಯಿತು.

ಶ್ರೀಮಠದ ಆಡಳಿತಾಧಿಕಾರಿ ಪ್ರಸನ್ನಾಚಾರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!