Thursday, December 2, 2021
Home ಸಮಾಚಾರ ಅಪರಾಧ ಸಮುದ್ರದಲ್ಲಿ ಮುಳುಗಿ ಯುವಕ ಮೃತ್ಯು

ಸಮುದ್ರದಲ್ಲಿ ಮುಳುಗಿ ಯುವಕ ಮೃತ್ಯು

ಸಮುದ್ರದಲ್ಲಿ ಮುಳುಗಿ ಯುವಕ ಮೃತ್ಯು

(ಸುದ್ದಿಕಿರಣ ವರದಿ)
ಉಡುಪಿ: ಮಲ್ಪೆ ಬೀಚ್ ಸಮುದ್ರದಲ್ಲಿ ಆಡುತ್ತಿದ್ದ ತುಮಕೂರಿನ ಯುವಕನೋರ್ವ ಅಲೆಗಳ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.5ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ತುಮಕೂರಿನ ಅತ್ತರ್ (23) ಎಂದು ಗುರುತಿಸಲಾಗಿದೆ.

ಅವರು ತನ್ನ ಸ್ನೇಹಿತರಾದ ಖಾಝಿ, ಸಲ್ಮಾನ್, ಇಲ್ಯಾಸ್, ಸಾಧಿಕ್, ಸಲೀಂ, ಅರ್ಬಾಸ್, ಸುಹೇಲ್ ಎಂಬವರೊಂದಿಗೆ ಅ.3ರಂದು ರಾತ್ರಿ ತುಮಕೂರಿನಿಂದ ಕಾರಿನಲ್ಲಿ ಹೊರಟು ಅ.4ರಂದು ಬೆಳಗ್ಗೆ ಮಂಗಳೂರಿನಲ್ಲಿ ಉಳಿದುಕೊಂಡು ನಂತರ ಅ.5ರಂದು ಮಧ್ಯಾಹ್ನ ಮಲ್ಪೆಬೀಚ್ ಗೆ ಬಂದಿದ್ದರು.

ಅಲ್ಲಿ ಇವರೆಲ್ಲ ಸಮುದ್ರ ತೀರದಲ್ಲಿ ಆಡುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಸಲ್ಮಾನ್, ಅರ್ಬಾಸ್, ಅತ್ತರ್ ನೀರಿನಲ್ಲಿ ಮುಳುಗಿದರೆನ್ನಲಾಗಿದೆ. ಇವರಲ್ಲಿ ಸಲ್ಮಾನ್ ಮತ್ತು ಅರ್ಬಾಸ್ ನನ್ನು ಮಲ್ಪೆ ಬೀಚ್ ನ ಟೂರಿಸ್ಟ್ ಬೋಡಗ ನವರು ರಕ್ಷಣೆ ಮಾಡಿದರು. ಆದರೆ ಅತ್ತರ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಬಳಿಕ ಅತ್ತರ್ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!