Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಉಚಿತ ಸಸಿಗಳ ವಿತರಣೆ ಮೇಳ ಸಸ್ಯೋತ್ಸವಕ್ಕೆ ಚಾಲನೆ

ಉಚಿತ ಸಸಿಗಳ ವಿತರಣೆ ಮೇಳ ಸಸ್ಯೋತ್ಸವಕ್ಕೆ ಚಾಲನೆ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
*******************************

(ಸುದ್ದಿಕಿರಣ ವರದಿ)

ಮಣಿಪಾಲ, ಜು. 6: ಜನಸಂಘ ಸಂಸ್ಥಾಪಕ, ಪ್ರಖರ ರಾಷ್ಟ್ರೀಯವಾದಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಮರಣಾರ್ಥ ಹಮ್ಮಿಕೊಂಡಿರುವ ವೃಕ್ಷಾರೋಪಣ ಕಾರ್ಯಕ್ರಮದಂಗವಾಗಿ ಇಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ ಠಾಕೂರ್ ನೇತೃತ್ವದಲ್ಲಿ ಇಲ್ಲಿನ ಈಶ್ವರ ನಗರದಲ್ಲಿ ಉಚಿತ ಸಸಿಗಳ ವಿತರಣೆ ಬೃಹತ್ ಮೇಳ ಸಸ್ಯೋತ್ಸವಕ್ಕೆ ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು.

ಪರಿಸರ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದ್ದು, ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಅಗತ್ಯತೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಸುಲಭವಾಗಿ, ಖರ್ಚಿಲ್ಲದೇ ಆಮ್ಲಜನಕ ದೊರೆಯುವ ಸಸ್ಯ ಸಂಪತ್ತನ್ನು ವಿಫುಲವಾಗಿ ಬೆಳೆಸಿದಲ್ಲಿ ಪರಿಸರ ಶುದ್ಧತೆ ಜೊತೆಗೆ ನಮ್ಮ ಆರೋಗ್ಯವೂ ಹಿತವಾಗಿರುತ್ತದೆ ಎಂದರು.

ಮಾದರಿ ಕಾರ್ಯಕ್ರಮ
ಶ್ಯಾಮ ಪ್ರಸಾದ ಮುಖರ್ಜಿ ಸ್ಮರಣಾರ್ಥ ವಿವಿಧೆಡೆ ವೃಕ್ಷಾರೋಪಣ ಕಾರ್ಯಕ್ರಮ ಆಯೋಜಿಸಿದ್ದರೂ ಇಲ್ಲಿ ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಸುಮಾರು 25 ಜಾತಿಯ ವಿವಿಧ ಸಸ್ಯಗಳನ್ನು ನಾಗರಿಕರಿಗೆ ಉಚಿತವಾಗಿ ನೀಡುವ ಕಾರ್ಯಕ್ರಮ ರಾಷ್ಟ್ರಕ್ಕೇ ಮಾದರಿಯಾಗಬಲ್ಲುದು ಎಂದರು.

ವನಮಹೋತ್ಸವ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನೆಟ್ಟ ಸಸಿಗಳನ್ನು ಪೋಷಿಸುವ ಜವಾಬ್ದಾರಿಯೂ ಇದೆ. ಸಸಿಗಳನ್ನು ಪಡೆದುಕೊಂಡವರು ಅವುಗಳನ್ನು ಚೆನ್ನಾಗಿ ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ಅಭ್ಯಾಗತರಾಗಿದ್ದ ಶಾಸಕ ರಘುಪತಿ ಭಟ್, ವಿವಿಧ ನರ್ಸರಿಗಳಿಂದ ಗುಣಮಟ್ಟದ ಸಸಿಗಳನ್ನು ಖರೀದಿಸಲಾಗಿದೆ. ಸುಮಾರು 25 ಸಾವಿರ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಉದ್ದೇಶವಿದೆ ಎಂದರು.

ನಗರದ ಬಿಜೆಪಿ ಅಧ್ಯಕ್ಷ ಮಹೇಶ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ರಾಜ್ಯ ಬಿಜೆಪಿ ಎಸ್. ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸ್ಥಳೀಯ ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್ ಮೊದಲಾದವರಿದ್ದರು.

ಕೊರೊನಾದಿಂದ ಮೃತಪಟ್ಟ 111 ಶವಗಳ ಅಂತ್ಯಸಂಸ್ಕಾರ ಮಾಡಿದ ಪ್ರಶಾಂತ್ ಸಗ್ರಿ ಹಾಗೂ ಮುರಳಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮೇಳದಲ್ಲಿ ವಿವಿಧ ಪ್ರಕಾರದ ಹೂವಿನ ಗಿಡಗಳು, ಕಸಿ ಮಾವಿನ ಗಿಡಗಳು, ವಿವಿಧ ಜಾತಿಯ ಹಣ್ಣಿನ ಗಿಡಗಳು, ಲಿಂಬೆ, ಕರಿಬೇವು, ಅಡಿಕೆ, ತೆಂಗು, ಕಾಳುಮೆಣಸು, ಮಜ್ಜಿಗೆ ಹುಲ್ಲು, ಜೊತೆಗೆ ಅರಣ್ಯ ಸಂಪತ್ತುಗಳಾದ ಸಾಗುವಾನಿ, ಶ್ರೀಗಂಧ, ರಕ್ತಚಂದನ, ಬಿಲ್ವಪತ್ರೆ ಮುಂತಾದ ಗಿಡಗಳನ್ನು ಉಚಿತವಾಗಿ ವಿತರಿಸಲಾಗುವುದು.

ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು ಎಂದು ನಗರ ಬಿಜೆಪಿ ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!