Monday, July 4, 2022
Home ಸಮಾಚಾರ ರಾಜ್ಯ ವಾರ್ತೆ 29 ಮಂದಿ ಸಚಿವರ ಪ್ರಮಾಣವಚನಕ್ಕೆ ಸಿದ್ಧತೆ, ಡಿಸಿಎಂ ಸ್ಥಾನ ರದ್ದು

29 ಮಂದಿ ಸಚಿವರ ಪ್ರಮಾಣವಚನಕ್ಕೆ ಸಿದ್ಧತೆ, ಡಿಸಿಎಂ ಸ್ಥಾನ ರದ್ದು

29 ಮಂದಿ ಸಚಿವರ ಪ್ರಮಾಣವಚನಕ್ಕೆ ಸಿದ್ಧತೆ, ಡಿಸಿಎಂ ಸ್ಥಾನ ರದ್ದು

(ಸುದ್ದಿಕಿರಣ ವರದಿ)

ಬೆಂಗಳೂರು: ಪಕ್ಷ ವರಿಷ್ಠರ ಸಲಹೆ ಸೂಚನೆಯಂತೆ 29 ಮಂದಿಯ ಸಚಿವರ ಯಾದಿ ಸಿದ್ಧವಾಗಿದ್ದು, ಇಂದು ಮಧ್ಯಾಹ್ನ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮಂತ್ರಿ ಮಂಡಲ ಸಿದ್ಧವಾಗಲಿದೆ.

ಉಪಮುಖ್ಯಮಂತ್ರಿ ಸ್ಥಾನ ಕೈಬಿಡಲಾಗಿದ್ದು, ಜಾತಿ ಲೆಕ್ಕಾಚಾರ, ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವರನ್ನು ಆಯ್ಕೆ ಮಾಡಲಾಗಿದೆ.

ಮೋದಿ ನಾಯಕತ್ವ, ಅಮಿತ್ ಶಾ ಮಾರ್ಗದರ್ಶನ, ನಡ್ಡಾ ಚತುರತೆ ಮೂಲಕ ಕ್ಯಾಬಿನೆಟ್ ರಚನೆ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಿ.ಎಸ್.ವೈ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಸತತವಾಗಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಮತ್ತು ಯೋಗೇಶ್ವರ್ ಅವರಿಗೂ ಸಚಿವ ಸ್ಥಾನ ಇಲ್ಲವಾಗಿದೆ. ಬಹು ಚರ್ಚಿತವಾಗಿದ್ದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೂ ಸಂಪುಟದಲ್ಲಿ ಸ್ಥಾನ ನೀಡಿಲ್ಲ.

ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಂಡು ಕ್ಯಾಬಿನೆಟ್ ರಚನೆ ಮಾಡಲಾಗಿದೆ. ಅನುಭವ ಮತ್ತು ಉತ್ಸಾಹಿಗಳನ್ನೊಳಗೊಂಡ ಕ್ಯಾಬಿನೆಟ್ ಇದಾಗಲಿದೆ. ಒಟ್ಟು 29 ಮಂದಿ ಸಚಿವರಲ್ಲಿ 8 ಲಿಂಗಾಯತ ಮಂತ್ರಿಗಳಿದ್ದರೆ, 7 ಒಬಿಸಿ ಮತ್ತು 7 ಒಕ್ಕಲಿಗರು, 3 ಕುರುಬ, 3 ದಲಿತ, ತಲಾ ಒಂದು ಬ್ರಾಹ್ಮಣ, ಎಸ್.ಟಿ, ಮಹಿಳೆ ಮತ್ತು ರೆಡ್ಡಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನಿಡಲಾಗಿದೆ. 8 ಮಂದಿ ಹಿರಿಯ ನಾಯಕರನ್ನು ಕೈಬಿಡಲಾಗಿದೆ.

ಆರ್. ಶಂಕರ್, ಸಿ.ಪಿ. ಯೋಗೇಶ್ವರ್, ಶ್ರೀಮಂತ ಪಾಟೀಲ್, ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಜೊತೆ ಬೆಳಗಾವಿಯ ಜಾರಕಿಹೊಳಿ ಸಹೋದರರಿಗೂ ಸಚಿವ ಸ್ಥಾನ ನೀಡಿಲ್ಲ.

ಸಿಎಂ ಕ್ಯಾಬಿನೆಟ್ ವಿವರ

1. ಕೆ. ಎಸ್. ಈಶ್ವರಪ್ಪ- ಶಿವಮೊಗ್ಗ

2. ಆರ್. ಅಶೋಕ್- ಪದ್ಮನಾಭನಗರ

3. ಅರವಿಂದ ಲಿಂಬಾವಳಿ- ಮಹದೇವಪುರ

4. ಡಾ. ಸಿ. ಎನ್. ಅಶ್ವತ್ಥನಾರಾಯಣ- ಮಲ್ಲೇಶ್ವರಂ

5. ಬಿ. ಶ್ರೀರಾಮುಲು- ಮೊಳಕಾಲ್ಮೂರು

6. ಉಮೇಶ್ ಕತ್ತಿ- ಹುಕ್ಕೇರಿ

7. ಎಸ್. ಟಿ. ಸೋಮಶೇಖರ್- ಯಶವಂತಪುರ

8. ಡಾ. ಕೆ. ಸುಧಾಕರ್- ಚಿಕ್ಕಬಳ್ಳಾಪುರ

9. ಬೈರತಿ ಬಸವರಾಜ್- ಕೆ. ಆರ್. ಪುರಂ

10. ಮುರುಗೇಶ್ ನಿರಾಣಿ- ಬೀಳಗಿ

11. ಶಿವರಾಮ ಹೆಬ್ಬಾರ್- ಯಲ್ಲಾಪುರ

12. ಶಶಿಕಲಾ ಜೊಲ್ಲೆ- ನಿಪ್ಪಾಣಿ

13. ಕೆ. ಸಿ. ನಾರಾಯಣ ಗೌಡ- ಕೆ. ಆರ್. ಪೇಟೆ

14. ವಿ. ಸುನಿಲ್ ಕುಮಾರ್- ಕಾರ್ಕಳ

15. ಆರಗ ಜ್ಞಾನೇಂದ್ರ- ತೀರ್ಥಹಳ್ಳಿ

16. ಗೋವಿಂದ ಕಾರಜೋಳ- ಮುಧೋಳ

17. ಮುನಿರತ್ನ- ಆರ್. ಆರ್. ನಗರ

18. ಎಂ.ಟಿ.ಬಿ. ನಾಗರಾಜ್ – ಎಂ.ಎಲ್.ಸಿ

19. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

20. ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

21. ಹಾಲಪ್ಪ ಆಚಾರ್ – ಯಲ್ಬುರ್ಗಿ

22. ಶಂಕರ್ ಪಾಟೀಲ್ ಮುನೇನಕೊಪ್ಪ- ನವಲಗುಂದ

23. ಕೋಟ ಶ್ರೀನಿವಾಸ ಪೂಜಾರಿ – ಎಂ.ಎಲ್.ಸಿ

24. ಪ್ರಭು ಚವ್ಹಾಣ್ – ಔರಾದ್

25. ವಿ. ಸೋಮಣ್ಣ – ಗೋವಿಂದರಾಜನಗರ

26. ಎಸ್. ಅಂಗಾರ- ಸುಳ್ಯ

27. ಆನಂದ ಸಿಂಗ್- ಹೊಸಪೇಟೆ

28. ಸಿ. ಸಿ. ಪಾಟೀಲ್- ನರಗುಂದ

29. ಬಿ. ಸಿ. ನಾಗೇಶ್- ತಿಪಟೂರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!