Saturday, July 2, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಕರ್ನಾಟಕದ ನಾಲ್ವರಿಗೆ ಸಚಿವ ಸ್ಥಾನ ಭಾಗ್ಯ

ಕರ್ನಾಟಕದ ನಾಲ್ವರಿಗೆ ಸಚಿವ ಸ್ಥಾನ ಭಾಗ್ಯ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
*******************************

(ಸುದ್ದಿಕಿರಣ ವರದಿ)

ನವದೆಹಲಿ, ಜು. 7: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಿದ್ದು, ಕರ್ನಾಟಕದ ನಾಲ್ವರು ಸಂಸದರೂ ಸೇರಿದಂತೆ ಒಟ್ಟು 43 ಮಂದಿ ಮೋದಿ ಕ್ಯಾಬಿನೆಟ್ ಗೆ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. 12 ಮಂದಿ ಸಚಿವರು ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ಡಿ. ವಿ. ಸದಾನಂದ ಗೌಡ ಅವರಿಗೆ ಮೋದಿ ಸಂಪುಟದಿಂದ ಗೇಟ್ ಪಾಸ್ ಸಿಕ್ಕಿದೆ.

ಈಗಾಗಲೇ ಮೋದಿ ಸಂಪುಟದಲ್ಲಿ ಕರ್ನಾಟಕದ ಪ್ರಹ್ಲಾದ ಜೋಷಿ ಇದ್ದಾರೆ. ನೂತನವಾಗಿ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್ ಸೇರ್ಪಡೆಯಾಗಲಿದ್ದಾರೆ.

ಮೋದಿ ಸಚಿವ ಸಂಪುಟದಲ್ಲಿ 11 ಮಂದಿ ಮಹಿಳೆಯರು, 13 ವಕೀಲರು, 6 ವೈದ್ಯರು, 5 ಎಂಜಿನಿಯರ್ಗಳು ಮತ್ತು 7 ಮಾಜಿ ಐಎಎಸ್ ಅಥವಾ ಐ.ಆರ್.ಎಸ್ ಅಧಿಕಾರಿಗಳಿದ್ದಾರೆ. ಆ ಮೂಲಕ ಶೈಕ್ಷಣಿಕ ಹಿನ್ನಲೆ ಮತ್ತು ಆಡಳಿತ ಅನುಭವಕ್ಕೂ ಮನ್ನಣೆ ನೀಡಲಾಗಿದೆ.

ಮೋದಿ ಸಂಪುಟಕ್ಕೆ ಹೊಸದಾಗಿ ಜ್ಯೋತಿರಾದಿತ್ಯ ಸಿಂಧಿಯಾ, ಸೊರ್ಬಾನಂದ ಸೊನವಾಲ್, ನಾರಾಯಣ ರಾಣೆ, ರಾಜ್ ಕುಮಾರ್ ಸಿಂಗ್, ಭೂಪೇಂದ್ರ ಯಾದವ್, ಕಿರಣ್ ರಿಜಿಜು ಸೇರಿದಂತೆ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!