ಸುದ್ದಿಕಿರಣ ವರದಿ
ಗುರುವಾರ, ಜುಲೈ 14
ಆಡುತ್ತಿದ್ದ ಮಗು ನೀರಿಗೆ ಬಿದ್ದು ದುರ್ಮರಣ
ಬ್ರಹ್ಮಾವರ: ತನ್ನ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ನೀರಿನ ಹೊಂಡಕ್ಕೆ ಬಿದ್ದು 4 ವರ್ಷದ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಉಪ್ಪೂರು ತೆಂಕಬೆಟ್ಟುವಿನಲ್ಲಿ ಸಂಭವಿಸಿದೆ.
ಉಪ್ಪೂರು ನಿವಾಸಿ ನೋರ್ಮನ್ ಮತ್ತು ಸಿಲ್ವಿಯಾ ದಂಪತಿ ಪುತ್ರ ಲಾರೆನ್ ಲೂವಿಸ್ ಮೃತಪಟ್ಟ ದುರ್ದೈವಿ ಹಸುಳೆ.
ಲಾರೆನ್ ಪೋಷಕರು ಕುವೈಟ್ ನಲ್ಲಿ ಉದ್ಯೋಗಿಗಳಾಗಿದ್ದು, ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು.
ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.