ಉಡುಪಿ: ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ಮಣಿಪಾಲ ವರುಣ್ ಪೈಪಿಂಗ್ ಸಿಸ್ಟಮ್ಸ್ 5 ಲಕ್ಷ ರೂ. ದೇಣಿಗೆ ನೀಡಿದ್ದು, ಜಿಲ್ಲಾಧಿಕಾರಿ ಮೂಲಕ ಹಸ್ತಾಂತರಿಸಲಾಯಿತು.
ವರುಣ್ ಪೈಪಿಂಗ್ ಸಿಸ್ಟಮ್ಸ್ ಪಾಲುದಾರರಾದ ಎಂ. ವಿಶ್ವನಾಥ ಭಟ್ ಮತ್ತು ವಲ್ಲಭ ಭಟ್ ಮಂಗಳವಾರ ಚೆಕ್ ನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಹಸ್ತಾಂತರಿಸಿದರು.
ಶಾಸಕರಾದ ಕೆ. ರಘುಪತಿ ಭಟ್ ಮತ್ತು ಲಾಲಾಜಿ ಆರ್. ಮೆಂಡನ್ ಇದ್ದರು