Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರಾಕೃತಿಕ ವಿಕೋಪ: 6 ಲಕ್ಷ ರೂ. ಪರಿಹಾರಧನ ವಿತರಣೆ

ಪ್ರಾಕೃತಿಕ ವಿಕೋಪ: 6 ಲಕ್ಷ ರೂ. ಪರಿಹಾರಧನ ವಿತರಣೆ

ಉಡುಪಿ: ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ 14 ಕುಟುಂಬಗಳಿಗೆ ಒಟ್ಟು 6 ಲಕ್ಷ 44 ಸಾವಿರದ 445 ರೂ. ಮೊತ್ತದ ಚೆಕ್ ನ್ನು ಬುಧವಾರ ತಾಲೂಕು ಕಚೇರಿ ಕೋರ್ಟ್ ಹಾಲ್ ನಲ್ಲಿ ಶಾಸಕ ರಘುಪತಿ ಭಟ್ ವಿತರಿಸಿದರು.

76 ಬಡಗಬೆಟ್ಟು ಗ್ರಾಮದ ಮನೋರಂಜಿನಿ ಜತ್ತನ್ 71,625 ರೂ., ಮೂಡನಿಡಂಬೂರು ಗ್ರಾಮದ ಬಿ. ದೇವಿ 61,250 ರೂ., ಕಿದಿಯೂರು ಗ್ರಾಮದ ಲಲಿತ 20,055 ರೂ., ಕಮಲ ಶ್ರೀಯಾನ್ 31,515 ರೂ., ಕೊಡವೂರು ಗ್ರಾಮದ ರತ್ನ ಆಚಾರಿ 60 ಸಾವಿರ ರೂ., ಶಾರದಾ 40 ಸಾವಿರ ರೂ., ಗೌರಿ 20 ಸಾವಿರ, ಗಿರಿಜಾ ಗಾಣಿಗ 45 ಸಾವಿರ, ಬೇಬಿ 60 ಸಾವಿರ, ಪದ್ಮಾವತಿ 75 ಸಾವಿರ, ಲಕ್ಷ್ಮಿ 40 ಸಾವಿರ, ಮಾಧವ ಬಂಗೇರ 40 ಸಾವಿರ, ಅಶೋಕ್ ಕರ್ಕೇರ 40 ಸಾವಿರ, ಲಲಿತಾ ಜತ್ತನ್ 40 ಸಾವಿರ ರೂ. ಚೆಕ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಆರಾಧನಾ ಸಮಿತಿ ಸದಸ್ಯರಾದ ಜಗದೀಶ್ ಆಚಾರ್ಯ, ಜೀವನ್, ಚಂದ್ರಶೇಖರ್ ನಾಯ್ಕ ಮತ್ತು ಸುನೀತಾ ಪೈ ಹಾಗೂ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಉಡುಪಿ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್, ಕಂದಾಯ ನಿರೀಕ್ಷಕ ಉಪೇಂದ್ರ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಕಾರ್ಯಪಾಲಕ ಅಭಿಯಂತರ ದೇವಿಪ್ರಸಾದ್, ಗ್ರಾಮಲೆಕ್ಕಾಧಿಕಾರಿ ಕಾರ್ತಿಕ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!