Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರಥಮ ಹಂತದ ಗ್ರಾ. ಪಂ. ಚುನಾವಣೆ: ಉಡುಪಿ ಜಿಲ್ಲೆಯಲ್ಲಿ 74 ಶೇ. ಮತದಾನ

ಪ್ರಥಮ ಹಂತದ ಗ್ರಾ. ಪಂ. ಚುನಾವಣೆ: ಉಡುಪಿ ಜಿಲ್ಲೆಯಲ್ಲಿ 74 ಶೇ. ಮತದಾನ

ಉಡುಪಿ: ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 74ರಷ್ಟು ಮತದಾನವಾಗಿದೆ. ಉಡುಪಿ ತಾಲೂಕಿನಲ್ಲಿ 74.80 ಶೇ., ಹೆಬ್ರಿ ತಾಲೂಕು 79.41 ಶೇ., ಬ್ರಹ್ಮಾವರ ತಾಲೂಕು 73.79 ಶೇ. ಹಾಗೂ ಬೈಂದೂರು ತಾಲ್ಲೂಕಿನಲ್ಲಿ 71.28 ಶೇ. ಮತದಾನವಾಗಿದೆ.

ಕೊರೊನಾ ಭಯದ ಕರಿಛಾಯೆಯ ನಡುವೆಯೂ ಗ್ರಾ. ಪಂ. ಚುನಾವಣೆಯಲ್ಲಿ ಮತದಾರರ ಉತ್ಸಾಹ ಹೆಚ್ಚಾಗಿ ಕಂಡುಬಂದಿತ್ತು. ಯಾರೂ ಮತದಾನದಿಂದ ಹೊರಗುಳಿಯದಂತೆ ಜಿಲ್ಲಾಡಳಿತ ಮುಂಚಿತವಾಗಿಯೇ ಜಾಗೃತಿ ಮೂಡಿಸಿದ್ದ ಪರಿಣಾಮ ಮತದಾನ ಹೆಚ್ಚಾಗಲು ಸಹಕಾರಿಯಾಯಿತು. ಜೊತೆಗೆ ಸ್ಪರ್ಧಿಗಳೂ ಮತದಾನ ಮಾಡುವಂತೆ ಮತದಾರರನ್ನು ಒತ್ತಾಯಿಸಿರುವುದು ಪೂರಕವಾಗಿತ್ತು.

ಲಾಕ್ ಡೌನ್ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡು ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ತವರಿಗೆ ಬಂದವರು ಜಿಲ್ಲೆಯಲ್ಲಿಯೇ ಕೃಷಿ, ಸ್ವಉದ್ಯೋಗ ಇತ್ಯಾದಿ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವುದೂ ಮತದಾನ ಪ್ರಮಾಣ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

ಮೇಲುಗೈ ಸಾಧಿಸಿದ ಮಹಿಳೆಯರು
ಮೊದಲ ಹಂತದ ಚುನಾವಣೆಯಲ್ಲಿ 1,90,651 ಮಹಿಳೆಯರು ಹಾಗೂ 1,78,625 ಪುರುಷರು ಮತದಾನ ಮಾಡಲು ಅರ್ಹತೆ ಹೊಂದಿದ್ದರು. ಅವರಲ್ಲಿ 1,44,745 (75.92 ಶೇ.) ಮಹಿಳೆಯರು ಮತ ಹಾಕಿದ್ದರೆ, 1,28,753 (72.08 ಶೇ.) ಪುರುಷರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ತಾಲೂಕುವಾರು ವಿವರ
ಉಡುಪಿ: ಒಟ್ಟು ಮತದಾರರು 1,11,918. ಮತ ಚಲಾವಣೆ 83,717
ಹೆಬ್ರಿ: ಒಟ್ಟು ಮತದಾರರು 9,542. ಮತ ಚಲಾವಣೆ 31,401
ಬ್ರಹ್ಮಾವರ: ಒಟ್ಟು ಮತದಾರರು 1,29,162 ಮತ ಚಲಾವಣೆ 95,183
ಬೈಂದೂರು: ಒಟ್ಟು ಮತದಾರರು 88,656. ಮತ ಚಲಾವಣೆ 63,199
ಜಿಲ್ಲೆಯ ಒಟ್ಟು ಮತದಾರರು 3,69,281. ಮತ ಚಲಾಯಿಸಿದವರು 2,73,500

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!