Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ವೈದ್ಯಕೀಯ ಉಪಕರಣಗಳಿಗಾಗಿ 78.18 ಲಕ್ಷ ಕೊಡುಗೆ

ವೈದ್ಯಕೀಯ ಉಪಕರಣಗಳಿಗಾಗಿ 78.18 ಲಕ್ಷ ಕೊಡುಗೆ

ಸುದ್ದಿಕಿರಣ ವರದಿ
ಶನಿವಾರ, ಜನವರಿ 8, 2022

ವೈದ್ಯಕೀಯ ಉಪಕರಣಗಳಿಗಾಗಿ 78.18 ಲಕ್ಷ ಕೊಡುಗೆ
ಉಡುಪಿ: ಅದಾನಿ ಫೌಂಡೇಶನ್ ಸಿಎಸ್.ಆರ್ ಯೋಜನೆಯಡಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಮಕ್ಕಳ 10 ಐಸಿಯು ವೆಂಟಿಲೇಟರ್ ಬೆಡ್ ಮತ್ತು ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಉಪಕರಣ ಸ್ಥಾಪಿಸಲು ಉಡುಪಿ ಜಿಲ್ಲಾಡಳಿತಕ್ಕೆ 78.18 ಲಕ್ಷ ರೂ. ಚೆಕ್ ನ್ನು ಅದಾನಿ ಸಮೂಹ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.

ಮಕ್ಕಳ ಐಸಿಯು ವೆಂಟಿಲೇಟರ್ ವಾರ್ಡ್ ಗಳಿಗೆ ಬೇಕಾದ ವೈದ್ಯಕೀಯ ಉಪಕರಣಗಳಾದ ಮಲ್ಟಿಪ್ಯಾರ ಮಾನಿಟರ್, ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್, ಸಿರಿಂಜ್ ಇನ್ಫ್ಯೂಷನ್ ಪಂಪ್, ಡ್ರಿಪ್ ಇನ್ಫ್ಯೂಷನ್ ಪಂಪ್, ಮೊಡ್ಯೂಲರ್ ವಾಲ್ ಮೌಂಟ್ ಮಾನಿಟರ್ ಸ್ಟ್ಯಾಂಡ್, ಪೋರ್ಟಬಲ್ ಯುಎಸ್.ಜಿ ಯಂತ್ರ, ಡಿಪಿಬ್ರಿಲ್ಲೇಟರ್, ಕಾರ್ಡಿಯಾಕ್ ಟೇಬಲ್, ಲಾರಿಂಗೋ ಸ್ಕೋಪ್ ಹ್ಯಾಂಡಲ್, ಡೆಸ್ಕ್ ಟಾಪ್ ಕಂಪ್ಯೂಟರ್, ಪ್ರಿಂಟರ್, ಯುಪಿಎಸ್, ರಿಸಸ್ಕಿಟೇಶನ್ ಕೌಚ್, ಇಸಿಜಿ ಯಂತ್ರ, ರೇಡಿಯಂಟ್ ವಾರ್ಮರ್, ಎಮರ್ಜೆನ್ಸಿ ಟ್ರಾಲಿ, ಹೈ ಫ್ಲೋ ನಸಾಲ್ ಕ್ಯಾನುಲ, ಬಿಪ್ಯಾಪ್ ಯಂತ್ರ, ಹ್ಯೂಮಿಡಿಫೈಯರ್, ವೆಂಟಿಲೇಟರ್ ಸರ್ಕ್ಯ್ಯೂಟ್ಸ್, ಇತ್ಯಾದಿಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

ಕೋವಿಡ್ 3ನೇ ಅಲೆ ಸಾಂಕ್ರಾಮಿಕ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ನಿಭಾಯಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯನ್ನು ಬಲಪಡಿಸಲು ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಐಸಿಯು ವೆಂಟಿಲೇಟರ್ ಹಾಸಿಗೆ ಮತ್ತು ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಸಾಧನಗಳ ಅಗತ್ಯತೆಯನ್ನು ಪರಿಗಣಿಸಿ ಅದಾನಿ ಫೌಂಡೇಶನ್ ಅನುದಾನ ನೀಡಿದೆ ಎಂದು ಕಿಶೋರ್ ಆಳ್ವ ತಿಳಿಸಿದರು.

ಈ ಹಿಂದೆ ಕೋವಿಡ್ ಎದುರಿಸಲು ಅದಾನಿ ಫೌಂಡೇಶನ್ 40 ಲಕ್ಷ ರೂ. ಮೊತ್ತವನ್ನು ಉಡುಪಿ ಜಿಲ್ಲಾಡಳಿತಕ್ಕೆ ನೀಡಿದ್ದು ಉಡುಪಿ ಜಿಲ್ಲಾಸ್ಪತ್ರೆ, ಕುಂದಾಪುರ ಸರಕಾರಿ ಆಸ್ಪತ್ರೆ ಮತ್ತು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಸ್ಥಾಪಿಸಲು ಉಪಯೋಗಿಸಿದೆ ಎಂದು ಆಳ್ವ ತಿಳಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!