Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಉನ್ನತಿ ಸಂಚಲನ ಮೆಗಾ ಸ್ಕಾಲರ್ ಶಿಪ್ ಗೆ 807 ಮಂದಿ ಆಯ್ಕೆ

ಉನ್ನತಿ ಸಂಚಲನ ಮೆಗಾ ಸ್ಕಾಲರ್ ಶಿಪ್ ಗೆ 807 ಮಂದಿ ಆಯ್ಕೆ

ಸುದ್ದಿಕಿರಣ ವರದಿ
ಬುಧವಾರ, ಜೂನ್ 15

ಉನ್ನತಿ ಸಂಚಲನ ಮೆಗಾ ಸ್ಕಾಲರ್ ಶಿಪ್ ಗೆ 807 ಮಂದಿ ಆಯ್ಕೆ
ಉಡುಪಿ: ಕೌಶಲ್ಯಾಧಾರಿತ ಶಿಕ್ಷಣ ನೀಡುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆ ಉನ್ನತಿ ಕೆರಿಯರ್ ಅಕಾಡೆಮಿ ಹಾಗೂ ಸಂಚಲನ ಸ್ವಯಂಸೇವಾ ಸಂಘಟನೆ ಸಂಯುಕ್ತಾಶ್ರಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಉನ್ನತಿ ಸಂಚಲನ ಮೆಗಾ ಶಿಪ್ ಸ್ಪರ್ಧೆಯ ಫಲಿತಾಂಶ ಘೋಷಿಸಲಾಗಿದೆ. ಸ್ಪರ್ಧೆಗೆ ಜಿಲ್ಲೆಯ 25 ಪದವಿ ಕಾಲೇಜಿನ 1,144 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, 807 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಬಿ.ಎಫ್.ಎಸ್.ಐ ಕ್ಷೇತ್ರದ ಮೂರು ಕೋರ್ಸ್ ತರಬೇತಿಗಳಾದ ಕೆ.ವೈ.ಸಿ- ಆ್ಯಂಟಿ ಮನಿ ಲ್ಯಾಂಡೆರಿಂಗ್, ಕಸ್ಟಮರ್ ಸರ್ವಿಸ್ ಮತ್ತು ಬ್ಯಾಂಕಿಂಗ್ ಸ್ಟಾಂಡರ್ಡ್ ಕೋಡ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಹಾಗೂ ಐಟಿ ಕ್ಷೇತ್ರದ ಮೂರು ತರಬೇತಿಗಳಾದ ಫ್ರಂಟ್ ಆ್ಯಂಡ್ ಡೆವಲಪ್ ಮೆಂಟ್, ಬ್ಯಾಕ್ ಆ್ಯಂಡ್ ಡೆವಲಪ್ ಮೆಂಟ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರಗಳ ಫಲಿತಾಂಶದಂತೆ ಜಿಲ್ಲೆಯ 53 ಮಂದಿ ವಿದ್ಯಾರ್ಥಿಗಳು ಸಂಪೂರ್ಣ ದತ್ತು ಸ್ವೀಕಾರಕ್ಕೆ, 92 ಮಂದಿ ಶೇ. 75 ಸ್ಕಾಲರ್ ಶಿಪ್ ಗೆ, 114 ಮಂದಿ ಶೇ. 50 ಸ್ಕಾಲರ್ ಶಿಪ್ ಗೆ, 176 ಮಂದಿ ಶೇ. 25 ಸ್ಕಾಲರ್ ಶಿಪ್ ಗೆ ಹಾಗೂ 425 ಮಂದಿ 2 ಸಾವಿರ ರೂ. ವರೆಗಿನ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದಿದ್ದಾರೆ.

ಒಟ್ಟಾರೆ ಜಿಲ್ಲೆಯ 807 ಮಂದಿ ವಿದ್ಯಾರ್ಥಿಗಳು ಈ ಸ್ಪರ್ಧೆ ಮೂಲಕ ಮುಂದಿನ 3 ತಿಂಗಳ ಅವಧಿಯಲ್ಲಿ ತರಬೇತಿ ಪಡೆದು ಉತ್ತಮ ಉದ್ಯೋಗಾವಕಾಶ ಗಿಟ್ಟಿಸಲು ಅವಕಾಶ ಹೊಂದಿದ್ದಾರೆ ಎಂದು ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಈ ಎಲ್ಲಾ ಕೋರ್ಸ್ ಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿದ್ದು, ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಪಡೆದುಕೊಳ್ಳಬೇಕು ಹಾಗೂ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ತಿಂಗಳ 20ರೊಳಗೆ ಸ್ಕಾಲರ್ ಶಿಪ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!