Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಖಾಯಂ ನಿವೇಶನ ಹಕ್ಕುಪತ್ರ ವಿತರಣೆ

ಖಾಯಂ ನಿವೇಶನ ಹಕ್ಕುಪತ್ರ ವಿತರಣೆ

ಉಡುಪಿ: ಕಳೆದ ಸುಮಾರು 30 ವರ್ಷದಿಂದ ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುತೋನ್ಸೆಯಲ್ಲಿ ವಾಸ್ತವ್ಯವಿದ್ದ ಶಂಶಾದ್ ಬಾನು ಅವರಿಗೆ 94ಸಿಸಿ ಅಡಿಯಲ್ಲಿ ಬಾಕಿಯಿದ್ದ ಖಾಯಂ ನಿವೇಶನ ಹಕ್ಕುಪತ್ರವನ್ನು ಶಾಸಕ ರಘುಪತಿ ಭಟ್ ಬುಧವಾರ ವಿತರಿಸಿದರು.

ಈ ಸಂದರ್ಭದಲ್ಲಿ ಗಣಪತಿ ಸೇವಾ ಸಹಕಾರಿ ಸಂಘ ಅಧ್ಯಕ್ಷ ಸತೀಶ್ ಶೆಟ್ಟಿ, ಕೆಮ್ಮಣ್ಣು ಗ್ರಾ. ಪಂ. ಸದಸ್ಯರಾದ ಪ್ರಶಾಂತ್ ಮತ್ತು ಪುರಂದರ, ಮಾಜಿ ಸದಸ್ಯರಾದ ಮಾಲತಿ ಮತ್ತು ವೆಂಕಟೇಶ್ ಕುಂದರ್ ಹಾಗೂ ಗ್ರಾಮಲೆಕ್ಕಾಧಿಕಾರಿ ಗಿರೀಶ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!