Thursday, July 7, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಸಿರಿಯಾ ವಿರುದ್ಧ ಅಮೆರಿಕಾ ವೈಮಾನಿಕ ದಾಳಿ

ಸಿರಿಯಾ ವಿರುದ್ಧ ಅಮೆರಿಕಾ ವೈಮಾನಿಕ ದಾಳಿ

ಸಿರಿಯಾ: ಇರಾಕ್ ಗಡಿ ಭಾಗದಲ್ಲಿರುವ ಸಿರಿಯಾದ ಮೇಲೆ ಅಮೆರಿಕಾ ವೈಮಾನಿಕ ದಾಳಿ ನಡೆಸಿದ್ದು, 5 ಮಂದಿ ಇರಾನ್ ಬೆಂಬಲಿತ ಇರಾಕ್ ಸೈನಿಕರು ಮೃತಪಟ್ಟಿದ್ದಾರೆ.

ಮಿಲಿಟರಿ ನೆಲೆಗಳ ಶಸ್ತ್ರಾಸ್ತ್ರ ಸಂಗ್ರಹಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಸಿರಿಯಾದ ಮೂವರು ಗಾಯಗೊಂಡಿದ್ದು, ಮಗುವೊಂದು ಮೃತಪಟ್ಟಿದೆ ಎಂದು ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ತಿಳಿಸಿದೆ.

ಜೋ ಬಿಡನ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಇರಾನ್ ಬೆಂಬಲಿತ ಸೇನೆಗಳ ಮೇಲೆ ಅಮೆರಿಕಾ 2 ಬಾರಿ ದಾಳಿ ನಡೆಸಿದೆ. ಈ ಹಿಂದೆ ಫೆಬ್ರವರಿಯಲ್ಲಿ ನಡೆದ ದಾಳಿಯಲ್ಲಿ 20ಕ್ಕೂ ಹೆಚ್ಚು ಬಂಡುಕೋರರು ಮೃತಪಟ್ಟಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!