Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಸೈಕಲ್ ಪಟು ಅಗ್ರಿಮಾಗೆ ಸ್ವಾಗತ

ಸೈಕಲ್ ಪಟು ಅಗ್ರಿಮಾಗೆ ಸ್ವಾಗತ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 10

ಸೈಕಲ್ ಪಟು ಅಗ್ರಿಮಾಗೆ ಸ್ವಾಗತ
ಮಂಗಳೂರು: ಎರ್ನಾಕುಲಂನಿಂದ ಲೇಹ್ ಲಡಾಖ್ ವರೆಗೆ ಸೈಕಲ್ ಸವಾರಿ ಹೊರಟಿರುವ ಯೋಗ ಪಟು ಅಗ್ರಿಮಾ ನಾಯರ್ ಅವರನ್ನು ಶಾಸಕ ವೇದವ್ಯಾಸ ಕಾಮತ್ ಭಾನುವಾರ ಮಂಗಳೂರಿನಲ್ಲಿ ಸ್ವಾಗತಿಸಿದರು.

ಯೋಗ ಥೆರಪಿ ಮತ್ತು ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಅಗ್ರಿಮಾ ನಾಯರ್, ಜೂನ್ 21ರಂದು ಎನರ್ಾಕುಲಂ ವಡುತಲಾ ಚಿನ್ಮಯ ವಿದ್ಯಾಲಯದಿಂದ ಯಾತ್ರೆ ಪ್ರಾರಂಭಿಸಿದ್ದಾರೆ.

ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಕಾಶ್ಮೀರ ಮೂಲಕ ಲಡಾಖ್ ತಲುಪಲಿದ್ದಾರೆ. ಪ್ರವಾಸದುದ್ದಕ್ಕೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ.

ಭಾರತ, ಜಗತ್ತಿಗೆ ಯೋಗದ ಮೂಲಕ ಆಗುವ ಆರೋಗ್ಯ ಲಾಭವನ್ನು ತಿಳಿಸಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ವಿಶ್ವ ಯೋಗ ದಿನದ ಪರಿಕಲ್ಪನೆ ನೀಡಿದ ಬಳಿಕ ಬಹಳಷ್ಟು ಜನರಿಗೆ ಯೋಗ ಕುರಿತು ಆಸಕ್ತಿ ಮೂಡಿದೆ.

ಎರ್ನಾಕುಲಂನಿಂದ ಲೇಹ್ ಲಡಾಖ್ ಗೆ ಸೈಕಲ್ ಸವಾರಿ ಹೊರಟಿರುವ ಅಗ್ರಿಮಾ ನಾಯರ್ ವಾಸ್ತವ್ಯ ಹೂಡುವ ಕಡೆಗಳಲ್ಲಿ ಮಕ್ಕಳಿಗೆ ಯೋಗ ಹೇಳಿಕೊಡುವ ಮೂಲಕ ವಿಶಿಷ್ಟ ಅಭಿಯಾನ ಪ್ರಾರಂಭಿಸಿದ್ದಾರೆ. ಅವರ ಪ್ರಯಾಣ ಸುಖಕರವಾಗಿರಲಿ ಎಂದು ಶಾಸಕ ಕಾಮತ್ ಹಾರೈಸಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರವಿಶಂಕರ್ ಮಿಜಾರ್, ಸ್ಥಳೀಯ ಕಾರ್ಪೊರೇಟರ್ ಜಯಲಕ್ಷ್ಮಿ ಶೆಟ್ಟಿ, ದಯಾ ಆರ್ಟ್ಸ್ ಮಾಲಕ ದಯಾನಂದ್, ಸೂರ್ಯಕಲಾ ಮೊದಲಾದವರಿದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!