Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಅಂಬೇಡ್ಕರ್ ಆಶಯ ಬಿಜೆಪಿಯಿಂದ ಸಾಕಾರ

ಅಂಬೇಡ್ಕರ್ ಆಶಯ ಬಿಜೆಪಿಯಿಂದ ಸಾಕಾರ

ಉಡುಪಿ: ಅಂಬೇಡ್ಕರ್ ಆಶಯಗಳನ್ನು ಬಿಜೆಪಿ ಈಡೇರಿಸುವಲ್ಲಿ ಶ್ರಮಿಸುತ್ತಿದೆ. ಅಂಬೇಡ್ಕರ್ ಅವರನ್ನು ಭಾರತೀಯ ಜನತಾ ಪಾಟರ್ಿ ಅತ್ಯಂತ ಗೌರವದಿಂದ ಕಾಣುತ್ತಿದೆ ಎಂದು ಜಿ. ಪಂ. ಅಧ್ಯಕ್ಷ ದಿನಕರಬಾಬು ಹೇಳಿದರು.
ಬಿಜೆಪಿ ಜಿಲ್ಲಾ ಎಸ್ ಸಿ ಮೋರ್ಚಾ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ಅವರು, ದೇಶದಲ್ಲಿ 370ನೇ ವಿಧಿ ರದ್ದು ಮಾಡಿ ಸಂವಿಧಾನದ ಗೌರವ ಎತ್ತಿಹಿಡಿದ ಪಕ್ಷ ಬಿಜೆಪಿ ಎಂದರು.
ಅಂಬೇಡ್ಕರ್ ಅಧಿವೇಶದಲ್ಲಿ ಭಾಗವಹಿಸದೇ ಇದ್ದ ದಿನ ನೋಡಿಕೊಂಡು ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್, 370ನೇ ವಿಧಿ ಅಂಗೀಕರಿಸುವ ಮೂಲಕ ಅಂಬೇಡ್ಕರ್ ಅವರಿಗೆ ದ್ರೋಹ ಎಸಗಿದೆ. ಆ ಮಸೂದೆಗೆ ಅಂಬೇಡ್ಕರ್ ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮೀಸಲಾತಿ ತೆಗೆದು ಹಾಕಲಾಗುವುದು ಎಂದು ಇತರ ಪಕ್ಷಗಳು ದಲಿತರನ್ನು ಹೆದರಿಸುತ್ತಾ ಬರುತ್ತಿದ್ದು, ಈ ಕುರಿತು ಪ್ರಧಾನಮಂತ್ರಿಮ ಮೀಸಲಾತಿ ತೆಗೆದು ಹಾಕುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿದ್ದಾರೆ ಎಂದು ದಿನಕರಬಾಬು ತಿಳಿಸಿದರು.
ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳೆಂಜಿ, ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಮತ್ತು ಸೇಸು ಎರ್ಮಾಳು, ಉಪಾಧ್ಯಕ್ಷ ಕೃಷ್ಣಮೂರ್ತಿ ಡಿ. ಬಿ., ನಗರ ಎಸ್ ಸಿ ಮೋರ್ಚಾ ಅಧ್ಯಕ್ಷ ಕಿರಣ್ ಕುಮಾರ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!