ಸುದ್ದಿಕಿರಣ ವರದಿ
ಸೋಮವಾರ, ಆಗಸ್ಟ್ 1
ಭಾರತ ಸೇವಾದಳ ಜಿಲ್ಲಾಧ್ಯಕ್ಷರಾಗಿ ಅಂಡಾರು ಆಯ್ಕೆ
ಉಡುಪಿ: ಭಾರತ ಸೇವಾ ದಳದ ಮುಂದಿನ 5 ವರ್ಷ ಅವಧಿಗೆ ಚುನಾವಣೆ ನಡೆದಿದ್ದು, ಜಿಲ್ಲಾಧ್ಯಕ್ಷರಾಗಿ ಉಡುಪಿ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷ- ನಗರಸಭಾ ಸದಸ್ಯ ಗಿರೀಶ್ ಎಂ. ಅಂಚನ್, ರಾಜ್ಯ ಕಾರ್ಯಕಾರಿ ಸದಸ್ಯ- ಆರೂರು ತಿಮ್ಮಪ್ಪ ಶೆಟ್ಟಿ, ಕಾರ್ಯದರ್ಶಿ- ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ ಕಾರ್ಕಳ ಹಾಗೂ ಖಜಾಂಚಿಯಾಗಿ ನಿವೃತ್ತ ಶಿಕ್ಷಕ ಹೆರಾಲ್ಡ್ ಡಿ’ಸೋಜಾ ಉಡುಪಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾಜಿ ಶಾಸಕ ಯು. ಆರ್. ಸಭಾಪತಿ, ಸುವರ್ಧನ ನಾಯಕ್, ಮಹಾಬಲ ಕುಂದರ್, ಸುಬ್ರಹ್ಮಣ್ಯ ಬಾಸ್ರಿ, ಶ್ಯಾಮಲಾ ಸುಧಾಕರ, ಎಸ್. ದಿನಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಾರಾಡಿ, ಗಣೇಶ ಶೆಟ್ಟಿ ಮಂದಾರ್ತಿ, ಶಿಕ್ಷಕ ಸದಸ್ಯರಾಗಿ ಕೃಷ್ಣ ಮೊಯ್ಲಿ ಕಾರ್ಕಳ ಹಾಗೂ ಜಯಲಕ್ಷ್ಮಿ ಬಿ. ಸಿ. ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಜಿಲ್ಲಾ ಸಂಘಟಕ ಫಕೀರ ಗೌಡ ಹಳಮನಿ ಸಹಕರಿಸಿದರು