Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ವಿದ್ವಾಂಸ ಅಂಗಡಿಮಾರು ಕೃಷ್ಣ ಭಟ್ಟರಿಗೆ ಶತಾಭಿವಂದನ

ವಿದ್ವಾಂಸ ಅಂಗಡಿಮಾರು ಕೃಷ್ಣ ಭಟ್ಟರಿಗೆ ಶತಾಭಿವಂದನ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ವಿದ್ವಾಂಸ ಅಂಗಡಿಮಾರು ಕೃಷ್ಣ ಭಟ್ಟರಿಗೆ ಶತಾಭಿವಂದನ
ಉಡುಪಿ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪೂರ್ವಾಶ್ರಮದ ತಂದೆ ಪಂಚಾಂಗಕರ್ತ, ಹಿರಿಯ ವಿದ್ವಾಂಸ 102ರ ಹರೆಯದ ಅಂಗಡಿಮಾರು ಕೃಷ್ಣ ಭಟ್ಟರಿಗೆ ಶುಕ್ರವಾರ ಕಲಾಸಂಘಟಕ ಉಡುಪಿ ಸುಧಾಕರ ಆಚಾರ್ಯ ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಶತಾಯುಷಿಗಳಿಗೆ ನಮನ ಕಾರ್ಯಕ್ರಮದಂಗವಾಗಿ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಕೃಷ್ಣ ಭಟ್ ನಿವಾಸದಲ್ಲಿ ಗೌರವಿಸಿದರು.

ಈ ಸಂದರ್ಭದಲ್ಲಿ ಉಡುಪಿ ಶ್ರೀಮದನಂತೇಶ್ವರ ದೇವಳದ ಅರ್ಚಕ ವೇದವ್ಯಾಸ ಐತಾಳ, ಅರ್ಚಕ ಗೋಪಾಲಕೃಷ್ಣ ಭಟ್, ಕಲಾಪೋಷಕ ಭುವನಪ್ರಸಾದ ಹೆಗ್ಡೆ ಮಣಿಪಾಲ, ಕಿನ್ನಿಗೋಳಿ `ಯುಗಪುರುಷ’ ಸಂಪಾದಕ ಭುವನಾಭಿರಾಮ ಉಡುಪ, ರಾಮಚಂದ್ರ ಭಟ್, ವಿಶ್ವೇಶ ಭಟ್ ಮತ್ತು ಮನೆಯವರು ಹಾಗೂ ಸಂಘಟಕ ಸುಧಾಕರ ಆಚಾರ್ಯ ಮತ್ತು ಅಮಿತಾ ಸುಧಾಕರ ಆಚಾರ್ಯ ಮೊದಲಾದವರಿದ್ದರು.

ಕಳೆದ 32 ವರ್ಷದಿಂದ ಪ್ರತೀ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ವಿಶಿಷ್ಟ ಕಲಾರಾಧನೆ ಮೂಲಕ ಆಚರಿಸುತ್ತಿರುವ ಸುಧಾಕರ ಆಚಾರ್ಯ ಈ ಬಾರಿ ಸ್ವಾತಂತ್ರ್ಯ ಅಮೃತ ಮಹೋತ್ಸವನ್ನು ಅಗಸ್ಟ್ 15ರಂದು ಇಲ್ಲಿನ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬೆಳಿಗ್ಗೆ 8.30ರಿಂದ ರಾತ್ರಿ 10.30ರ ವರೆಗೆ ಯಕ್ಷಗಾನ ಅಮೃತ ರಸಧಾರೆ ಕಾರ್ಯಕ್ರಮದ ಮೂಲಕ ಆಚರಿಸಲಿದ್ದಾರೆ.

ಈ ಆಚರಣೆ ಅಂಗವಾಗಿ ಆಗಸ್ಟ್ 15ರಂದೇ ಜನಿಸಿದ ಶತಾಯುಷಿ ಮೂಡುಬಿದಿರೆ ಮಿಜಾರು ಗುತ್ತು ಆನಂದ ಆಳ್ವ ಅವರನ್ನು ಅವರ ಸುಪುತ್ರ ಮೂಡುಬಿದಿರೆ ಶಿಕ್ಷಣ ಶಿಲ್ಪಿ ಡಾ. ಎಂ. ಮೋಹನ ಆಳ್ವ ಸ್ವಗೃಹದಲ್ಲಿ ಸನ್ಮಾನಿಸಿದ್ದರು.

ಸ್ವಾತಂತ್ರ್ಯ ಮಹೋತ್ಸವದ 70ನೇ ವರ್ಷಾಚರಣೆ ಸಂದರ್ಭ ಪರಿಶಿಷ್ಟ ಜಾತಿಯ ಶತಾಯುಷಿ ಸಹೋದರರೀರ್ವರನ್ನು ಸನ್ಮಾನಿಸಿದ್ದನ್ನಿಲ್ಲಿ ಸ್ಮರಿಸಬಹುದು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!