Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕೃಷ್ಣಮಠಕ್ಕೆ ಸಚಿವ ಅಂಗಾರ ಭೇಟಿ

ಕೃಷ್ಣಮಠಕ್ಕೆ ಸಚಿವ ಅಂಗಾರ ಭೇಟಿ

ಉಡುಪಿ: ಮೀನುಗಾರಿಕೆ ಮತ್ತು ಬಂದರು ಖಾತೆ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉಡುಪಿಗೆ ಮಂಗಳವಾರ ಆಗಮಿಸಿದ್ದ ಎಸ್. ಅಂಗಾರ ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು.

ಕನಕ ನವಗ್ರಹ ಕಿಂಡಿ ಮೂಲಕ ಕೃಷ್ಣ ದರ್ಶನ ಮಾಡಿದ ಅವರು, ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಪರ್ಯಾಯ ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್, ಪಿ.ಆರ್.ಓ ಶ್ರೀಶ ಭಟ್ ಕಡೆಕಾರು, ಶ್ರೀಕೃಷ್ಣ ಸೇವಾ ಸಮಿತಿಯ ಪ್ರದೀಪ ರಾವ್ ಮೊದಲಾದವರಿದ್ದರು.

ಸೋಮಶೇಖರ ಭಟ್ ಮನೆಗೆ ಭೇಟಿ
ಅದಕ್ಕೂ ಮುನ್ನ ಬಿಜೆಪಿ ಹಿರಿಯ ನಾಯಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು ಹಾಗೂ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಎಂ. ಸೋಮಶೇಖರ್ ಭಟ್ ಮನೆಗೆ ಭೇಟಿ ನೀಡಿದರು.

ಉಭಯ ಕುಶಲೋಪರಿ ಮಾತನಾಡಿದ ಸಚಿವ ಅಂಗಾರ, ಈಚೆಗೆ ಮೋದಿ ಕರೆ ಮಾಡಿ ಸೋಮಶೇಖರ ಭಟ್ ಅವರ ಆರೋಗ್ಯ ವಿಚಾರಿಸಿದ್ದನ್ನು ಸ್ಮರಿಸಿದರು.

ಡಾ. ಆಚಾರ್ಯ ನಿವಾಸಕ್ಕೆ ಭೇಟಿ
ಬಳಿಕ ಮಾಜಿ ಸಚಿವ ಕೀರ್ತಿಶೇಷ ಡಾ. ವಿ. ಎಸ್. ಆಚಾರ್ಯ ಮನೆಗೆ ಭೇಟಿ ನೀಡಿದರು. ಆಚಾರ್ಯ ಪತ್ನಿ ಶಾಂತಾ ವಿ. ಆಚಾರ್ಯ ಅವರ ಆರೋಗ್ಯ ವಿಚಾರಿಸಿದರು. ಪುತ್ರ ಡಾ. ರವಿರಾಜ್ ವಿ. ಆಚಾರ್ಯ ಇದ್ದರು.

ಪಕ್ಷ ಕಟ್ಟುವಲ್ಲಿ ಡಾ. ಆಚಾರ್ಯ ಅವರ ಕೊಡುಗೆಯನ್ನು ಸಚಿವರು ಸ್ಮರಿಸಿದರು.

ಶಾಂತಾ ಆಚಾರ್ಯ ಸಚಿವ ಅಂಗಾರ ಅವರಿಗೆ ಡಾ. ಆಚಾರ್ಯ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.

ಕಚ್ಚೂರು ಕ್ಷೇತ್ರಕ್ಕೆ ಭೇಟಿ
ಬಳಿಕ ಕಚ್ಚೂರು ಮಾಲ್ತಿದೇವಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಕ್ಷೇತ್ರದ ಬಬ್ಬು ಸ್ವಾಮಿ ಹಾಗೂ ಮಾಲ್ತಿದೇವಿ ದರ್ಶನ ಪಡೆದರು. ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ಜಿ. ಪಂ. ಅಧ್ಯಕ್ಷ ದಿನಕರಬಾಬು ಮೊದಲಾದವರಿದ್ದರು.

ಬಳಿಕ ಆನೆಗುಡ್ಡೆ ಕ್ಷೇತ್ರಕ್ಕೆ ಭೇಟಿ ನೀಡಿದರು.

ಸಚಿವರಿಗೆ ಅಭಿನಂದನೆ
ಉಡುಪಿ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ನೂತನ ಸಚಿವ ಎಸ್. ಅಂಗಾರ ಅವರಿಗೆ ಬಿಜೆಪಿ ಕಾರ್ಯಕರ್ತರಾದ ವಾಸುದೇವ ಬನ್ನಂಜೆ, ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೇಸು ಎರ್ಮಾಳು ಹಾಗೂ ಎಸ್.ಸಿ. ಮೋರ್ಚಾ ನಗರ ಮಾಜಿ ಅಧ್ಯಕ್ಷ ಸುಧಾಕರ ಅಮೀನ್ ಕಿನ್ನಿಮುಲ್ಕಿ, ಮುರಳಿಧರ ಬನ್ನಂಜೆ ಮೊದಲಾದವರಿ ಗೌರವಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!