Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಕೃಷ್ಣಮಠದಲ್ಲಿ ಯಾತ್ರಾರ್ಥಿಗಳ ಭೋಜನ ಪ್ರಸಾದಕ್ಕೆ ಮರುಚಾಲನೆ

ಕೃಷ್ಣಮಠದಲ್ಲಿ ಯಾತ್ರಾರ್ಥಿಗಳ ಭೋಜನ ಪ್ರಸಾದಕ್ಕೆ ಮರುಚಾಲನೆ

ಉಡುಪಿ: ಅನ್ನಬ್ರಹ್ಮನ ಸನ್ನಿಧಿ, ಇಲ್ಲಿನ ಶ್ರೀಕೃಷ್ಣಮಠದಲ್ಲಿ ಕೊರೊನಾದಿಂದಾಗಿ ಯಾತ್ರಾರ್ಥಿಗಳು ಮತ್ತು ಸಾರ್ವಜನಿಕ ಭಕ್ತಾದಿಗಳಿಗೆ ಸ್ಥಗಿತಗೊಂಡಿದ್ದ ಅನ್ನಪ್ರಸಾದ ಭೋಜನ ವ್ಯವಸ್ಥೆಗೆ ಭಾನುವಾರ ಚಾಲನೆ ನೀಡಲಾಯಿತು.

ಸ್ವತಃ ಶ್ರೀಪಾದರಿಂದ ಅನ್ನಪ್ರಸಾದ ವಿತರಣೆ
ಭೋಜನಶಾಲೆಯಲ್ಲಿ ಸ್ವತಃ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭೋಜನ ಪ್ರಸಾದ ಬಡಿಸುವ ಮೂಲಕ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲಾಯಿತು.

ಸುಮಾರು 5 ಸಾವಿರ ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು. ಅನ್ನ, ಪಲ್ಯ, ಸಾರು, ಸಾಂಬಾರು, ಪಾಯಸ, ಹಯಗ್ರೀವ ಮಡ್ಡಿ ಹಾಗೂ ಮಜ್ಜಿಗೆ ನೀಡಲಾಯಿತು.

ಪರ್ಯಾಯ ಅದಮಾರು  ಶ್ರೀಕೃಷ್ಣ ಮಠದ ವ್ಯವಸ್ಥಾಪಕ ಗೋವಿಂದರಾಜ್, ಮಠದ ರೋಹಿತ್ ತಂತ್ರಿ, ಶ್ರೀಕೃಷ್ಣ ಸೇವಾ ಸಮಿತಿಯ ಗಣೇಶ್ ಹೆಬ್ಬಾರ್ ಮೊದಲಾದವರು ಇದ್ದರು.

ಇಂದಿನಿಂದ ಪ್ರತಿನಿತ್ಯ ಶ್ರೀಕೃಷ್ಣಮಠದಲ್ಲಿ ಯಾತ್ರಾರ್ಥಿಗಳೂ ಸೇರಿದಂತೆ ಸಾರ್ವಜನಿಕರಿಗೆ ಅನ್ನಪ್ರಸಾದ ಭೋಜನದ ವ್ಯವಸ್ಥೆ ಇದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!