Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಬ್ಯಾಂಕಿಗೆ ವಂಚನೆ ಪ್ರಕರಣ: ಅರ್ಜಿ ವಜಾಗೊಳಿಸಿದ ಕೇಂದ್ರ ಮಾಹಿತಿ ಆಯೋಗ

ಬ್ಯಾಂಕಿಗೆ ವಂಚನೆ ಪ್ರಕರಣ: ಅರ್ಜಿ ವಜಾಗೊಳಿಸಿದ ಕೇಂದ್ರ ಮಾಹಿತಿ ಆಯೋಗ

ಉಡುಪಿ: ಮಾಹಿತಿ ಹಕ್ಕುದಾರ ಟಿ. ಜೆ. ಅಬ್ರಹಾಂ, ಮಾಜಿ ಸಚಿವ ಪ್ರಮೋದ್ ವಿರುದ್ಧ ಮಾಡಿದ್ದ ಬ್ಯಾಂಕ್ ವಂಚನೆ ಆರೋಪವನ್ನು ಕೇಂದ್ರ ಮಾಹಿತಿ ಆಯೋಗ ವಜಾ ಮಾಡಿದೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಿಂಡಿಕೇಟ್ ಬ್ಯಾಂಕಿಗೆ ವಂಚನೆ ಮಾಡಿದ್ದಾರೆ ಹಾಗೂ ಅದರಲ್ಲಿ ಬ್ಯಾಂಕಿನವರೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಅಬ್ರಹಾಂ, ಬ್ಯಾಂಕಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಓ)ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಪರಿಶೀಲಿಸಿದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ, `ಅರ್ಜಿ ಸಾರ್ವಜನಿಕ ಹಿತಾಸಕ್ತಿಯಡಿ ಬರುವುದಿಲ್ಲ, ಖಾಸಗಿ ಮಾಹಿತಿ ಕೇಳಿರುವುದರಿಂದ ದೂರು ವಜಾ ಮಾಡಲಾಗಿದೆ’ ಎಂದು ತಿಳಿಸಿದ್ದರು.

ಅದನ್ನು ಪ್ರಶ್ನಿಸಿ, ಅಬ್ರಹಾಂ, ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಮನವಿ ಪರೀಶೀಲಿಸಿದ ಮೇಲ್ಮನವಿ ಪ್ರಾಧಿಕಾರ, ಕೇಂದ್ರ ಮಾಹಿತಿ ಅಧಿಕಾರಿ ನೀಡಿರುವ ಆದೇಶವನ್ನೇ ಪುರಸ್ಕರಿಸಿದೆ.

ಪ್ರಮೋದ್ ಮಧ್ವರಾಜ್ ಬ್ಯಾಂಕಿನ ಕಾನೂನು ಹಾಗೂ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿರುವುದಾಗಿ ಬ್ಯಾಂಕಿನ ಅಧಿಕಾರಿಗಳು ಆಯೋಗಕ್ಕೆ ಮಾಹಿತಿ ನೀಡಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!