Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕಳೆ, ಕಲಾತ್ಮಕ ಆಭರಣಗಳಿಗೆ ಸಾಕ್ಷಿಯಾದ ಆರ್ಟಿಸ್ಟ್ರಿ ಚಿನ್ನಾಭರಣ ಪ್ರದರ್ಶನ ಮಾರಾಟ

ಕಳೆ, ಕಲಾತ್ಮಕ ಆಭರಣಗಳಿಗೆ ಸಾಕ್ಷಿಯಾದ ಆರ್ಟಿಸ್ಟ್ರಿ ಚಿನ್ನಾಭರಣ ಪ್ರದರ್ಶನ ಮಾರಾಟ

ಉಡುಪಿ: ಇಲ್ಲಿನ ಗೀತಾಂಜಲಿ ಶೋಪರ್ ಸಿಟಿ ಕಟ್ಟಡದಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ಶನಿವಾರ ಆರಂಭಗೊಂಡ ಆರ್ಟಿಸ್ಟ್ರಿ ಬ್ರಾಂಡೆಡ್ ಜುವೆಲ್ಲರಿ ಶೋ ಕಲಾತ್ಮಕ ಆಭರಣಗಳ ವಿಶ್ವರೂಪ ದರ್ಶನ ಮಾಡಿಸಿದೆ.

ಮಹೇಶ್ ಬೆಟ್ಟಿನ್, ಆಶಾ ಅಮೀನ್ ಮಲ್ಪೆ, ಬಿಂದು ತಂಗಪ್ಪನ್ ಅನುಕ್ರಮವಾಗಿ ಎರಾ, ಡಿವೈನ್ ಚಿನ್ನಾಭರಣ ಮತ್ತು ವಜ್ರಾಭರಣ ಅನಾವರಣಗೊಳಿಸಿ ಶುಭ ಹಾರೈಸಿದರು.

ಉಡುಪಿ ಶೋರೂಮ್ ಮುಖ್ಯಸ್ಥ ಹಫೀಝ್ ರೆಹಮಾನ್ ಮಾತನಾಡಿ ಸೂಕ್ಷ್ಮಾತಿಸೂಕ್ಷ್ಮ ಕುಸುರಿ ಕೆಲಸಗಳಿಂದ ಸಿದ್ಧಪಡಿಸಲಾದ ಚಿನ್ನಾಭರಣಗಳಲ್ಲಿ ಕುಶಲಕರ್ಮಿಗಳ ಕಲಾಕೌಶಲ್ಯ ಪ್ರತಿಬಿಂಬಿತವಾಗುತ್ತಿದೆ. ಪ್ರತೀ ಚಿನ್ನಾಭರಣಗಳು ಅವರ ನೈಪುಣ್ಯತೆ ಮತ್ತು ಕುಶಲತೆಗೆ ಸಾಕ್ಷಿಯಾಗಿದೆ. ಪ್ರದರ್ಶನದ ಶಿರ್ಷಿಕೆಯಾದ ಪ್ರತೀ ಅಭರಣದಲ್ಲೂ ಕಳೆಯಿದೆ ಎಂಬುದಕ್ಕೆ ಪೂರಕವಾಗಿದೆ. ಆರ್ಟಿಸ್ಟ್ರಿ ಬ್ರಾಂಡೆಡ್ ಜುವೆಲ್ಲರಿಯ ಸಬ್ ಬ್ರ್ಯಾಂಡ್ ಚಿನ್ನಾಭರಣ ಪ್ರದರ್ಶನದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹ ಪ್ರದರ್ಶನದಲ್ಲಿವೆ ಎಂದರು.

ಮೈನ್ ನಲ್ಲಿ ವಜ್ರಾಭರಣಗಳ ಅಭೂತಪೂರ್ವ ಸಂಗ್ರಹ, ನವವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣೀಕೃತ ವಜ್ರಾಭರರಣಗಳಿವೆ. ಡಿವೈನ್ ನಲ್ಲಿ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಚಿನ್ನಾಭರಣಗಳನ್ನು ಕಾಣಬಹುದು. ಪ್ರಶಿಯಾ ದಲ್ಲಿ ರೂಬಿ, ಎಮರಾಲ್ಡ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು, ಎಥಿನಿಕ್ಸ್ ನಲ್ಲಿ ಕರಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟ ಕಲ್ಪಿಸಲಾಗಿದೆ. ಏರ ಅನ್ನಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹವಾದರೆ, ಹಾಯ್ ಯುವತಿಯರ ಮನಸೆಳೆಯುವ ಮನಮೋಹಕ ಆಭರಣಗಳ ವಿಭಾಗ. ಸ್ಟಾರ್ಲೆಟ್ ನಲ್ಲಿ ಚಿಕ್ಕ ಮಕ್ಕಳಿಗಾಗಿ ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ಚಿನ್ನಾಭರಣಗಳು ಈ ಪ್ರದರ್ಶನದ ವಿಶೇಷವಾಗಿದೆ ಎಂದು ಹಫೀಝ್ ಮಾಹಿತಿ ನೀಡಿದರು.

ಈ ತಿಂಗಳ 14ರ ವರೆಗೆ ಇರುವ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸಂಪೂರ್ಣ ಪಾರದರ್ಶಕ, ಉಚಿತ ನಿರ್ವಹಣೆ, ವಿನಿಮಯದಲ್ಲಿ ಶೂನ್ಯ ಕಡಿತ, ಬೈ- ಬ್ಯಾಕ್ ಗ್ಯಾರಂಟಿ, ಉಚಿತ ವಿಮೆ ಇದೆ. ಎಲ್ಲಾ ಆಭರಣಗಳೂ ಹಾಲ್ ಮಾರ್ಕ್ ಹೊಂದಿದ್ದು, 28 ರೀತಿಯ ಪರೀಕ್ಷೆಗೊಳಪಡಿಸಿದ ವಜ್ರಾಭರಣಗಳು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನ ವಿಶೇಷತೆಯಾಗಿದೆ.

ಗ್ರಾಹಕರಿಗೆ ಭಾರತದಾದ್ಯಂತ ಚಿನ್ನಾಭರಣಗಳಿಗೆ ಒನ್ ಇಂಡಿಯಾ ಒನ್ ಗೋಲ್ಡ್ ದರ, ಶುದ್ಧ ಚಿನ್ನ, ಸುಂದರ ವಿನ್ಯಾಸ, ನ್ಯಾಯಸಮ್ಮತ ತಯಾರಿಕೆ ಶುಲ್ಕ, ನ್ಯಾಯಯುತ ಬೆಲೆಯ ಭರವಸೆ, ಬ್ರಾಂಡೆಡ್ ವಾಚ್ ಗಳ ಮೇಲೆಯೂ ವಿಶೇಷ ಕಡಿತ ನೀಡಲಾಗುವುದು ಎಂದರು.

ಆಭರಣಗಳನ್ನು ಧರಿಸಿ ಉಡುಪಿಯ ರೂಪದರ್ಶಿಗಳಾದ ವೈಭವಿ ಭಂಡಾರಿ ಮಣಿಪಾಲ, ಪ್ರಸಿದ್ದಿ ಸಾಲ್ಯಾನ್, ಅಕ್ಷತಾ ಕೆ. ಶೆಟ್ಟಿ, ಅನುಷಾ ಅಮೀನ್, ಮೌಸಮಿ ಶೆಟ್ಟಿ ಕಾಪು, ರಕ್ಷಿತಾ ಶೆಟ್ಟಿ ವಕ್ವಾಡಿ ರಾಂಪ್ ವಾಕ್ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಸಂಸ್ಥೆಯ ವಿಜ್ಞೇಶ್ ನಿರೂಪಿಸಿ, ರಾಘವೇಂದ್ರ ನಾಯಕ್ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!