Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಪ್ರಕಟ

ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಪ್ರಕಟ

ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಪ್ರಕಟ

ಉಡುಪಿ, ನ. 24 (ಸುದ್ದಿಕಿರಣ ವರದಿ): ಹಿರಿಯ ಜಾನಪದ ಸಂಶೋಧಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಹೆಸರಿನಲ್ಲಿ ಉಡುಪಿ ಯುವವಾಹಿನಿ ಆಶ್ರಯದಲ್ಲಿ ನೀಡಲಾಗುವ ಜಾನಪದ ವಿದ್ವಾಂಸ ಪ್ರಶಸ್ತಿಗೆ ಪ್ರೊ.ಬಿ. ಶಿವರಾಮ ಶೆಟ್ಟಿ ಮತ್ತು ಜಾನಪದ ಕಲಾವಿದ ಪ್ರಶಸ್ತಿಗೆ ಸೀತಾರಾಮ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ನ. 28ರಂದು ನಗರದ ಚಿಟ್ಪಾಡಿ ಲಕ್ಷ್ಮೀ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತೆಂಕನಿಡಿಯೂರು ಸಕರ್ಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ| ಸುರೇಶ್ ರೈ ಕೆ. ಪ್ರಶಸ್ತಿ ಪ್ರದಾನ ಮಾಡುವರು. ಸಹಾಯಕ ಪ್ರಾಧ್ಯಾಪಕ ಡಾ| ದುಗ್ಗಪ್ಪ ಕಜೆಕಾರು ಅಭಿನಂದನಾ ಭಾಷಣ ಮಾಡುವರು. ಯುವವಾಹಿನಿ ಮಾಜಿ ಅಧ್ಯಕ್ಷ ಕೆ. ರಾಜೀವ ಪೂಜಾರಿ ಮತ್ತು ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿರುವರು ಎಂದರು

ಸುದ್ದಿಗೋಷ್ಠಿಯಲ್ಲಿ ಬನ್ನಂಜೆ ಬಾಬು ಅಮೀನ್, ಯುವವಾಹಿನಿ ಅಧ್ಯಕ್ಷ ಪ್ರವೀಣ್ ಡಿ. ಪೂಜಾರಿ, ಸಂಚಾಲಕ ಭಾಸ್ಕರ ಸುವರ್ಣ ಮತ್ತು ರಘುನಾಥ ಮಾಬಿಯನ್ ಇದ್ದರು.

ಪ್ರೊ. ಶಿವರಾಮ ಶೆಟ್ಟಿ
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಶಿವರಾಮ ಶೆಟ್ಟಿ ಅವರು, ಮಂಗಳೂರು ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿ, ಕನಕ ಅಧ್ಯಯನ ಪೀಠದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಕನ್ನಡ ಜಾನಪದದ ಕುರಿತು 50ಕ್ಕೂ ಹೆಚ್ಚು ಸಂಶೋಧನ ಲೇಖನ, 70ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಪಠ್ಯಪುಸ್ತಕಗಳನ್ನೂ ರಚಿಸಿದ್ದಾರೆ.

ಸೀತಾರಾಮ್ ಕುಮಾರ್
ಯಕ್ಷಗಾನದ ಚಾರ್ಲಿ ಚಾಪ್ಲಿನ್ ಎಂದೇ ಖ್ಯಾತರಾಗಿರುವ, ಉಭಯ ತಿಟ್ಟುಗಳಲ್ಲಿಯೂ ಹಾಸ್ಯ ಕಲಾವಿದರಾಗಿ ಪ್ರಸಿದ್ಧರಾಗಿರುವ ಸೀತಾರಾಮ ಕುಮಾರ್, ಪ್ರಸ್ತುತ ಹೊಸನಗರ ಮೇಳದಲ್ಲಿದ್ದಾರೆ.

ತಮ್ಮ 60ನೇ ಹುಟ್ಟುಹಬ್ಬ ಸಂದರ್ಭದಲ್ಲಿ 60 ಮಂದಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿದ್ದರು.

ಅವರಿಗೆ 2018ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತ್ತು.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!