ಸುದ್ದಿಕಿರಣ ವರದಿ
ಶುಕ್ರವಾರ, ಜೂನ್ 10
ಮೀನುಗಾರಿಕೆ ಫೆಡರೇಶನ್ ಗೆ ಅತ್ಯುತ್ತಮ ವಿಕ್ರಯ ಪ್ರಶಸ್ತಿ
ಕುಂದಾಪುರ: 2021- 22ನೇ ಸಾಲಿನಲ್ಲಿ ಮಂಗಳೂರು ವಿಭಾಗದಲ್ಲಿ ಅತ್ಯಧಿಕ ಡೀಸೆಲ್ ಮಾರಾಟಕ್ಕಾಗಿ ಸೂಪರ್ ಸೆಲ್ಲರ್ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಪಡೆದುಕೊಂಡಿದೆ.
ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಅವರು ಇಲ್ಲಿನ ಕೋಟೇಶ್ವರ ಯುವ ಮೆರಿಡಿಯನ್ ಸಭಾಂಗಣದಲ್ಲಿ ನಡೆದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮಂಗಳೂರು ವಿಭಾಗದ ರಿಟೇಲ್ ಡೀಲರ್ ಗಳ ಸಮಾವೇಶದಲ್ಲಿ ಇಂಡಿಯನ್ ಆಯಿಲ್ ಕಂಪೆನಿ ಕರ್ನಾಟಕ ವಿಭಾಗ ಪ್ರಬಂಧಕ ಡಿ. ಎಲ್. ಪ್ರಮೋದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
2021- 22ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಸುಮಾರು 126 ಕೋಟಿ ರೂ. ಮೌಲ್ಯದ 16,868 ಕಿಲೋ ಲೀಟರ್ ಅತ್ಯಧಿಕ ಡೀಸೆಲ್ ಮಾರಾಟ ಮಾಡುವ ಮೂಲಕ ಈ ಪ್ರಶಸ್ತಿಗೆ ಆಯ್ಕೆಯಾಗಿದೆ.