Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಮುರ್ಮು ಆಯ್ಕೆ ಪ್ರಜಾಪ್ರಭುತ್ವದ ಹಿರಿಮೆಗೆ ಸಂದ ಗೌರವ: ಕುಯಿಲಾಡಿ

ಮುರ್ಮು ಆಯ್ಕೆ ಪ್ರಜಾಪ್ರಭುತ್ವದ ಹಿರಿಮೆಗೆ ಸಂದ ಗೌರವ: ಕುಯಿಲಾಡಿ

ಸುದ್ದಿಕಿರಣ ವರದಿ
ಗುರುವಾರ, ಜುಲೈ 21

ಮುರ್ಮು ಆಯ್ಕೆ ಪ್ರಜಾಪ್ರಭುತ್ವದ ಹಿರಿಮೆಗೆ ಸಂದ ಗೌರವ: ಕುಯಿಲಾಡಿ
ಉಡುಪಿ: ದೇಶದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿರುವುದು ಪ್ರಜಾಪ್ರಭುತ್ವದ ಹಿರಿಮೆಗೆ ಸಂದ ಗೌರವ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ವ್ಯಾಖ್ಯಾನಿಸಿದ್ದಾರೆ..ದೇಶದ 15ನೇ ರಾಷ್ಟ್ರಪತಿಯಾಗಿ ಮೊಟ್ಟಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಅಭೂತಪೂರ್ವ ದಾಖಲೆಯ ಮತಗಳಿಂದ ಆಯ್ಕೆಯಾಗಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

ದೇಶದ ನೂತನ ರಾಷ್ಟ್ರಪತಿ ಮುರ್ಮು ಅವರಿಗೆ ಅಭಿನಂದನೆ ಸಲ್ಲಿಸಿರುವ ಕುಯಿಲಾಡಿ, ರಾಷ್ಟ್ರಪತಿಯವರ ರಾಷ್ಟ್ರ ಹಿತ ಕಾಯಕದ ಮೂಲಕ ಸಮಾಜದ ಕಟ್ಟ‌ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ‌ ಅಂತ್ಯೋದಯ ಪರಿಕಲ್ಪನೆ ಇನ್ನಷ್ಟು ಸದೃಡವಾಗಿ ಸಾಕಾರಗೊಳ್ಳುವಂತಾಗಲಿ ಎಂದು‌ ಸುರೇಶ ನಾಯಕ್ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!