Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಬ್ರಹ್ಮಾವರ ಯೋಜನಾ ಪ್ರಾಧಿಕಾರ ರದ್ದು

ಬ್ರಹ್ಮಾವರ ಯೋಜನಾ ಪ್ರಾಧಿಕಾರ ರದ್ದು

ಉಡುಪಿ: ಈ ಹಿಂದೆ ಘೋಷಿಸಲಾಗಿದ್ದ ಬ್ರಹ್ಮಾವರ ಸ್ಥಳೀಯ ಯೋಜನಾ ಪ್ರಾಧಿಕಾರವನ್ನು ರದ್ದುಗೊಳಿಸಿ ಸರ್ಕಾರ ಆದೇಶ ನೀಡಿದೆ.

ಬ್ರಹ್ಮಾವರ ಪಟ್ಟಣವನ್ನು ಪುರಸಭೆ ಎಂದು ಘೋಷಣೆ ಮಾಡುವ ಪ್ರಕ್ರಿಯೆ ಪ್ರಸ್ತುತ ಸ್ಥಗಿತಗೊಂಡಿದ್ದು, ಅದರಿಂದಾಗಿ ಚಾಂತಾರು, ಹಾರಾಡಿ, ವಾರಂಬಳ್ಳಿ, ಹಂದಾಡಿ ಪಂಚಾಯತ್ ಗಳಲ್ಲಿ 9 & 11 ಹಾಗೂ ಕಟ್ಟಡ ಲೈಸನ್ಸ್ ನೀಡುವಲ್ಲಿ ಜನರಿಗೆ ತಾಂತ್ರಿಕ ತೊಂದರೆಯಾಗುತ್ತಿತ್ತು.

ಅದನ್ನು ಮನಗಂಡ ಶಾಸಕ ರಘುಪತಿ ಭಟ್ ಯೋಜನಾ ಪ್ರಾಧಿಕಾರ ರದ್ದುಗೊಳಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಬ್ರಹ್ಮಾವರ ಪಟ್ಟಣ ಪುರಸಭೆ ಆಗುವ ವರೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಕಲಂ 4 ಬಿ ಅನ್ವಯ ಬ್ರಹ್ಮಾವರ ಪಟ್ಟಣಕ್ಕೆ ಸ್ಥಳೀಯ ಯೋಜನಾ ಪ್ರದೇಶ ಎಂದು ಘೋಷಣೆ ಮಾಡಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ ಎಂದು ಶಾಸಕ ಭಟ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!