ಮಣಿಪಾಲ: ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗ ಸಹಯೋಗದೊಂದಿಗೆ ಕಲಾವಿದರಾದ ಶ್ರೀನಾಥ ಮಣಿಪಾಲ ಮತ್ತು ರವಿ ಹಿರೆಬೆಟ್ಟು ಬೃಹತ್ 4ಡಿ ರಿಬ್ಬನ್ ಕಲಾಕೃತಿ ರಚಿಸಿದ್ದು, ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥೆ ಡಾ. ಸುಮಾ ನಾಯರ್ ಅನಾವರಣಗೊಳಿಸಿದರು.
ತಂಬಾಕು ಬಳಕೆ ಕ್ಯಾನ್ಸರ್ ಗೆ ಕಾರಣ. ಆದ್ದರಿಂದ ಕ್ಯಾನ್ಸರ್ ಹಾಗೂ ತಂಬಾಕಿನ ದುಷ್ಪರಿಣಾಮ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಡಾ. ನಾಯರ್ ತಿಳಿಸಿದರು.
ಭಾರತದಲ್ಲಿ ಚಾಲನೆಯಲ್ಲಿರುವ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಲುದ್ದೇಶಿಸಿರುವುದು ಸ್ವಾಗತಾರ್ಹ. ತಂಬಾಕು ಬಳಕೆ ಪ್ರಮಾಣ ಮತ್ತಷ್ಟು ತಗ್ಗಿಸಲು ಹೊಸ ಕಾಯ್ದೆ ಪೂರಕವಾಗಲಿದೆ ಎಂದು ಸಮುದಾಯ ವೈದ್ಯಕೀಯ ವಿಭಾಗದ ಡಾ. ಮುರಳೀಧರ ಕುಲಕರ್ಣಿ ಹೇಳಿದರು.
ಕಲಾಕೃತಿ ಕೆಎಂಸಿ ಇಂಟರಾಕ್ಟ್ ಆವರಣದಲ್ಲಿ ಒಂದು ವಾರಗಳ ಕಾಲ ಪ್ರದರ್ಶನಗೊಳ್ಳಲಿದೆ