Saturday, July 2, 2022
Home ಸಮಾಚಾರ ಸಂಘಸಂಗತಿ ಅಂಬಲಪಾಡಿ ದೇವಳದಿಂದ ಕಿಟ್ ಹಸ್ತಾಂತರ

ಅಂಬಲಪಾಡಿ ದೇವಳದಿಂದ ಕಿಟ್ ಹಸ್ತಾಂತರ

ಉಡುಪಿ: ಇಲ್ಲಿನ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ವತಿಯಿಂದ ಉಡುಪಿ ತಾಲೂಕಿನ 161ಸಿ ದರ್ಜೆಯ ದೇವಸ್ಥಾನಗಳ 208 ಸಿಬಂದಿಗಳಿಗೆ ಸುಮಾರು 4 ಲಕ್ಷ ರೂ. ವೆಚ್ಚದ ಆಹಾರ ಕಿಟ್ ನ್ನು ದೇವಸ್ಥಾನದ ಕ್ಷೇತ್ರಾಧಿಕಾರಿ ಡಾ. ನಿ. ಬೀ. ವಿಜಯ ಬಲ್ಲಾಳ್ ಮಂಗಳವಾರ ತಾಲೂಕು ಕಚೇರಿ ಕಂದಾಯ ಅಧಿಕಾರಿ ಉಪೇಂದ್ರ ಅವರಿಗೆ ಹಸ್ತಾಂತರಿಸಿದರು.

ಕಳೆದ ವರ್ಷ ಸರ್ಕಾರಿ ಅಧಿಕಾರಿಗಳು, ಶಾಸಕ ಮತ್ತು ಸಚಿವರ ಸೂಚನೆ ಮೇರೆಗೆ ಬಡಜನರಿಗೆ 4 ಸಾವಿರ ಆಹಾರ ಕಿಟ್, ಒಂದು ತಿಂಗಳ ಕಾಲ ವಲಸೆ ಕಾರ್ಮಿಕರು, ಕೆಲವು ಆಸ್ಪತ್ರೆಯ ಸೋಂಕಿತ ರೋಗಿಗಳು ಮತ್ತು ಜಿಲ್ಲಾಸ್ಪತ್ರೆ ಸಿಬಂದಿಗಳಿಗೆ ಪ್ರತಿದಿನ 2,500 ಊಟ ನೀಡಲಾಗಿತ್ತು ಎಂದು ಡಾ. ಬಲ್ಲಾಳ್ ತಿಳಿಸಿದರು.

ಅಂಬಲಪಾಡಿ ಗ್ರಾಮಕರಣಿಕ ಅಭಿಷೇಕ್, ಸಹಾಯಕ ಅಶೋಕ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!