ಉಡುಪಿ: ಭಾರತೀಯ ರೆಡ್ ಕ್ರಾಸ್ ಉಡುಪಿ ವತಿಯಿಂದ ಮಣಿಪುರ ಪಂಚಾಯತ್ ವ್ಯಾಪ್ತಿಯ ಮರ್ಣೆ ಪರಿಸರದ ಸುಮಾರು 8 ಮಂದಿ ವಸತಿ ರಹಿತರಿಗೆ ಅಡುಗೆ ಪಾತ್ರೆಗಳ ಕಿಟ್, ಟಾರ್ಪಲ್, ಬಕೆಟ್, ಸೋಪ್ ಇತ್ಯಾದಿಗಳನ್ನು ಸಂಸ್ಥೆ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಈಚೆಗೆ ವಿತರಿಸಿದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಡಿ.ಡಿ.ಆರ್.ಸಿ ಕಾರ್ಯದರ್ಶಿ ಕೆ. ಸನ್ಮತ್ ಹೆಗ್ಡೆ, ಮಣಿಪುರ ಪಂಚಾಯತ್ ಸದಸ್ಯರಾದ ಪ್ರಜ್ವಲ್ ಹೆಗ್ಡೆ, ವಾಣಿ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂದಿ ಅನುಷಾ ಇದ್ದರು