ಉಡುಪಿ: ರೋಟರಿ ಉಡುಪಿ ಮತ್ತು ಶ್ರೀಕೃಷ್ಣ ರೋಟರಾಕ್ಟ್ ಸಂಯುಕ್ತವಾಗಿ ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ದಿನಸು ಸಾಮಾನು, ನಿವಾಸಿಗಳಿಗೆ ಅಗತ್ಯವಿರುವ ಔಷಧ ನೀಡಲಾಯಿತು.
ಇದೇ ಸಂದರ್ಭದಲ್ಲಿ ರೋಟರಿ ಸದಸ್ಯರಾದ ದೀಪಾ ಭಂಡಾರಿ ಮತ್ತು ದಿನೇಶ್ ಭಂಡಾರಿ ತಮ್ಮ ಪುತ್ರನ ಹುಟ್ಟುಹಬ್ಬ ಅಂಗವಾಗಿ ಆಶ್ರಮ ನಿವಾಸಿಗಳಿಗೆ ಮಧ್ಯಾಹ್ನದ ಊಟ ನೀಡಿದರು.
ದಿನಸು ಸಾಮಾನುಗಳ ಪ್ರಾಯೋಜಕರಾದ ರಾಮಚಂದ್ರ ಉಪಾಧ್ಯಾಯ ಮತ್ತು ವನಿತಾ ಉಪಾಧ್ಯಾಯ, ಅವಶ್ಯಕ ಔಷಧ ನೀಡಿದ ಶ್ರೀಕೃಷ್ಣ ರೋಟರಾಕ್ಟ್ ಮತ್ತು ಅಧ್ಯಕ್ಷೆ ಶೃತಿ ಶೆಣೈ ಅವರನ್ನು ರೋಟರಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ ಮತ್ತು ಆಶ್ರಮದ ತನುಲಾ ಅಭಿನಂದಿಸಿದರು