ಉಡುಪಿ: ಉದ್ಯಾವರ ಪಾಪನಾಶಿನಿ ಹೊಳೆಯಲ್ಲಿ ನೆರೆ ಬಂದಾಗ ಹಾಗೂ ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ರಕ್ಷಿಸುವ ಬಗೆಯನ್ನು ಕೇಂದ್ರ ಸರಕಾರದ ಎನ್.ಡಿ.ಆರ್.ಎಫ್. ತಂಡ ಅಣುಕು ಪ್ರದರ್ಶನ ಹಮ್ಮಿಕೊಂಡಿದ್ದು, ಅದರಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಎಚ್.ಆರ್.ಎಸ್.ನ ಸುಮಾರು 20 ಮಂದಿ ಸದಸ್ಯರು ಪಾಲ್ಗೊಂಡಿದ್ದರು.
ನೀರಿನಲ್ಲಿ ಮುಳುಗಿದಾಗ ವ್ಯಕ್ತಿ ಪ್ರಥಮವಾಗಿ ತನ್ನನ್ನು ರಕ್ಷಿಸಿಕೊಳ್ಳುವ ಮತ್ತು ಇತರರನ್ನು ರಕ್ಷಿಸುವ ಬಗ್ಗೆ ಪ್ರಾಯೋಗಿಕವಾಗಿ ಪ್ರದರ್ಶನ ನೀಡಲಾಯಿತು.
ಎನ್.ಡಿ.ಆರ್,ಎಫ್. ಪ್ರಾಯೋಕತ್ವದಲ್ಲಿ ನಡೆದ ಈ ಪ್ರದರ್ಶನದಲ್ಲಿ ಉಡುಪಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಅಗ್ನಿಶಾಮಕ ದಳದ ಅಧಿಕಾರಿಗಳು, ಆರೋಗ್ಯ ಇಲಾಖೆ, ಹೋಮ್ ಗಾರ್ಡ್ ನ ಅಧಿಕಾರಿಗಳು ಭಾಗವಹಿಸಿದ್ದರು.
ಎಚ್.ಆರ್,ಎಸ್. ಕ್ಯಾಪ್ಟನ್ ಅಮೀರ್ ಸಿದ್ದಿಕ್, ಉಡುಪಿ ಸಂಚಾಲಕ ಹಸನ್ ಕೋಡಿಬೆಂಗ್ರೆ, ಬಿಲಾಲ್ ಮಲ್ಪೆ, ಅಬ್ದುಲ್ ಗಫೂರ್ ಕುಳಾಯಿ, ಮುನವ್ವರ್, ಅನ್ವರ್ ಅಲಿ ಕಾಪು, ಸಲೀಮ್ ತೀರ್ಥಹಳ್ಳಿ ಮೊದಲಾದವರಿದ್ದರು
ಅಣುಕು ಪ್ರದರ್ಶನದಲ್ಲಿ ಎಚ್.ಆರ್.ಎಸ್. ತಂಡ ಭಾಗಿ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...