ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ಈಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಂಥವರನ್ನು ಆಸ್ಪತ್ರೆಗೆ ಸಾಗಿಸಲು ಪೂರಕವಾಗುವಂತೆ ಅಂಬುಲೆನ್ಸ್ ಖರೀದಿಗೆ ಸಹಾಯ ಮಾಡಬೇಕೆಂಬ ಶಾಸಕ ರಘುಪತಿ ಭಟ್ ಮನವಿಗೆ ಸ್ಪಂದಿಸಿದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಹಿತ ಉಡುಪಿ ಅಷ್ಟಮಠಾಧೀಶರು ಶನಿವಾರ 20 ಲಕ್ಷ ರೂ. ಚೆಕ್ ಹಸ್ತಾಂತರಿಸಿದರು.
ಶ್ರೀಕೃಷ್ಣ ಮಠದಲ್ಲಿ ಎಲ್ಲಾ ಅಷ್ಟಮಠಾಧೀಶರು ಸೇರಿ ಶಾಸಕರ ಸಮ್ಮುಖದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಧುಸೂದನ ನಾಯಕ್ ಅವರಿಗೆ 20 ಲಕ್ಷ ರೂ. ಚೆಕ್ ನೀಡಿದರು.