Thursday, July 7, 2022
Home ಸಮಾಚಾರ ಸಂಘಸಂಗತಿ ತುರ್ತು ಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

ತುರ್ತು ಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

ಕಾಪು: ಇಲ್ಲಿನ ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ವತಿಯಿಂದ ಗಲ್ಫ್ ಸಮಿತಿ ಸಹಕಾರದೊಂದಿಗೆ ಪೊಲಿಪು ಜಮಾತೆ ವ್ಯಾಪ್ತಿ ಹಾಗೂ ಪುರಸಭೆಯ ಸ್ಥಳೀಯ ವಾರ್ಡ್ ನಾಗರಿಕರ ತುರ್ತು ಚಿಕಿತ್ಸೆಗೆ ಉಚಿತವಾಗಿ ನೀಡಲು ಆಕ್ಸಿಜನ್ ಸಿಲಿಂಡರ್ ನ್ನು ಸಂಸ್ಥೆ ಕಚೇರಿಯಲ್ಲಿ ಈಚೆಗೆ ಲೋಕಾರ್ಪಣೆಗೊಳಿಸಲಾಯಿತು.

ಪೊಲಿಪು ಮೊಹಲ್ಲಾದ ಖಾಝಿ ಪಿ. ಬಿ. ಅಹಮದ್ ಮುಸ್ಲಿಯಾರ್ ಚಾಲನೆ ನೀಡಿದರು. ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್ ಹಾಗೂ ಕಾಪು ಪೊಲೀಸ್ ಠಾಣೆಯ ಎಎಸ್.ಐ ಗೋಪಾಲ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆ ಅಧ್ಯಕ್ಷ ಬಶೀರ್ ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಖತೀಬ್ ಇರ್ಷಾದ್ ಸಅದಿ, ಸಂಸ್ಥೆಯ ಮಾಜಿ ಅಧ್ಯಕ್ಷ ಅಕ್ರಂ, ಸಲಹೆಗಾರ ಕೆ. ಎಂ. ರಝಾಕ್, ಉಪಾಧ್ಯಕ್ಷ ಅಶ್ರಫ್ ಮತ್ರಿ, ಕಾರ್ಯದರ್ಶಿ ಜಲೀಲ್, ಕೋಶಾಧಿಕಾರಿ ಅಬ್ದುಲ್ ಅಝೀಜ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!