Saturday, July 2, 2022
Home ಸಮಾಚಾರ ಸಂಘಸಂಗತಿ ಆಮ್ಲಜನಕ ಸಾಂದ್ರಕ ಹಸ್ತಾಂತರ

ಆಮ್ಲಜನಕ ಸಾಂದ್ರಕ ಹಸ್ತಾಂತರ

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ವತಿಯಿಂದ 3 ಆಮ್ಲಜನಕ ಸಾಂದ್ರಕಗಳನ್ನು ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಅವರಿಗೆ ಹಸ್ತಾಂತರಿಸಿದರು.

ಡಿ.ಎಚ್.ಓ. ಡಾ. ನಾಗಭೂಷಣ ಉಡುಪ, ರೆಡ್ ಕ್ರಾಸ್ ಸಂಸ್ಥೆ ಡಾ| ತಲ್ಲೂರು ಶಿವರಾಮ ಶೆಟ್ಟಿ ನಾಯಕತ್ವದಲ್ಲಿ ಉತ್ತಮ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಅದು ಇನ್ನಷ್ಟು ಜನರಿಗೆ ತಲುಪಲಿ ಎಂದು ಆಶಿಸಿದರು.

ರೆಡ್ ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ., ಡಿಡಿಆರ್.ಸಿ ಕಾರ್ಯದರ್ಶಿ ಕೆ. ಸನ್ಮತ್ ಹೆಗ್ಡೆ, ಸದಸ್ಯೆ ರಮಾದೇವಿ, ಬೈಂದೂರು ಶಾಖಾ ಸಭಾಪತಿ ಸಿ. ನಿತಿನ್ ಶೆಟ್ಟಿ ಬೈಂದೂರು, ಖಜಾಂಚಿ ಸಂತೋಷ ಶೆಟ್ಟಿ ಬೈಂದೂರು ಇದ್ದರು.

ಗೌರವ ಖಜಾಂಚಿ ಡಾ. ಅರವಿಂದ ನಾಯಕ್ ಅಮ್ಮುಂಜೆ ಸ್ವಾಗತಿಸಿ, ವಂದಿಸಿದರು. ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!