ಗೆಳೆಯರ ಬಳಗದಿಂದ ಆರ್ಥಿಕ ನೆರವು
(ಸುದ್ದಿಕಿರಣ ವರದಿ)
ಕಾರ್ಕಳ: ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ ನೇತೃತ್ವದಲ್ಲಿ ನಡೆಯಲಿರುವ ಕಾಶ್ಮೀರ ಸನ್ಸೆಟ್ ದಂಡಯಾತ್ರೆಗೆ ಆಯ್ಕೆಯಾದ ಸುಮಲತಾ ಬಜಗೋಳಿ ಅವರಿಗೆ ಗೆಳೆಯರ ಬಳಗ ನೆಲ್ಲಿಗುಡ್ಡೆ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಸಂಸ್ಥೆ ಅಧ್ಯಕ್ಷ ಸುರೇಶ್ ಸಾಲಿಯನ್ ಹಾಗೂ ಪದಾಧಿಕಾರಿಗಳು ಆರ್ಥಿಕ ನೆರವು ನೀಡಿದರು.
ಭೀಮರತ್ನ ಪ್ರಶಸ್ತಿ ಪುರಸ್ಕೃತೆ ಸುಮಲತಾ, ಇಲ್ಲಿನ ಡಾ| ಜಿ. ಶಂಕರ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ನಾಯಕಿ ಹಾಗೂ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಳೆವಿದ್ಯಾರ್ಥಿನಿ. ಪ್ರಸ್ತುತ ಅವರು ಉಡುಪಿ ವಾರ್ತಾ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ವತಿಯಿಂದ ಮೂರನೇ ಬಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿದ ಆಯ್ಕೆಯಾಗಿರವ ಏಕೈಕ ಅಭ್ಯರ್ಥಿಯಾಗಿರುವ ಸುಮಲತಾ, ಈ ಹಿಂದೆ ಒರಿಯೆಂಟೇಶನ್ ಮತ್ತು ಬೇಸಿಕ್ ಕ್ಯಾಂಪ್ ಪೂರೈಸಿದ್ದಾರೆ. ಇದೀಗ ಮೂರನೇ ಬಾರಿಗೆ ಸೆ. 14ರಿಂದ 29ರ ವರೆಗೆ ಜಮ್ಮು ಕಾಶ್ಮೀರದ ಪಹಲ್ಛಮ್ ನಲ್ಲಿ ನಡೆಯಲಿರುವ ಎಕ್ಸ್ಪೆಡಿಷನ್ ಕೋರ್ಸ್ ಕ್ಯಾಂಪ್ ಗೆ ಆಯ್ಕೆಯಾಗಿದ್ದಾರೆ.