ಉಡುಪಿ: ರೋಟರಿ ಉಡುಪಿ ವತಿಯಿಂದ ಕಡೆಕಾರು ಗ್ರಾಮದ 7 ಮಂದಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಕೊರೊನಾ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ. ರೋಟರಿಯಿಂದ ನೀಡಿದ ಈ ಸಹಾಯ ಸುತ್ಯರ್ಹ ಎಂದು ಅಭ್ಯಾಗತರಾಗಿದ್ದ ಕಡೆಕಾರು ಗ್ರಾ. ಪಂ. ಉಪಾಧ್ಯಕ್ಷ ನವೀನ್ ಶೆಟ್ಟಿ ಹೇಳಿದರು.
ರೋಟರಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ದೀಪಾ ಭಂಡಾರಿ, ರೋಟರಿ ಸದಸ್ಯರಾದ ಬಿ. ವಿ. ಲಕ್ಷ್ಮೀನಾರಾಯಣ, ರಾಮಚಂದ್ರ ಉಪಾಧ್ಯಾಯ, ದಿನೇಶ್ ಭಂಡಾರಿ ಮತ್ತು ವನಿತಾ ಉಪಾಧ್ಯಾಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿದ್ದೇಶ್ ಎಸ್. ಮೊದಲಾದವರಿದ್ದರು