Wednesday, July 6, 2022
Home ಸಮಾಚಾರ ಸಂಘಸಂಗತಿ ರಮ್ಝಾನ್ ಅಂಗವಾಗಿ ಆಹಾರ ಕಿಟ್ ವಿತರಣೆ

ರಮ್ಝಾನ್ ಅಂಗವಾಗಿ ಆಹಾರ ಕಿಟ್ ವಿತರಣೆ

ಉಡುಪಿ: ಗೆಳೆಯರ ತಂಡವನ್ನು ಕಟ್ಟಿಕೊಂಡು ಈಗಾಗಲೇ ಕೆಲವೊಂದು ಸಮಾಜಮುಖಿ ಸೇವೆ ಮಾಡುತ್ತಿರುವ ಹ್ಯುಮಾನಿಟಿ ಸರ್ವಿಸ್ ಡಿಫೆನ್ಸ್ ಫೋರ್ಸ್ (ಎಸ್.ಎಸ್.ಎಫ್.) ಉಡುಪಿ ತಂಡ ವತಿಯಿಂದ ರಮ್ಝಾನ್ ಈದ್ ದಿನ ಅಂಗವಾಗಿ ಚಿಸ್ತಿಯ್ಯಾ ದ್ರಿಕ್ಸ್ ಸ್ವಲಾತ್ ಚಾರಿಟೇಬಲ್ ಕಮಿಟಿ ಸಹಕಾರದೊಂದಿಗೆ ಗುರುವಾರ ಉಡುಪಿ ಬಸ್ ನಿಲ್ದಾಣ, ಕಲ್ಸಂಕ, ಅಜ್ಜರಕಾಡು, ಸಂತೆಕಟ್ಟೆ, ಬ್ರಹ್ಮಾವರ ಪರಿಸರದಲ್ಲಿರುವ ಹಲವು ನಿರಾಶ್ರಿತರು, ಭಿಕ್ಷುಕರು, ಅಸಹಾಯಕರು ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಸುಮಾರು 200ಕ್ಕೂ ಅಧಿಕ ಆಹಾರ ಪೊಟ್ಟಣ ನೀಡಲಾಯಿತು.

ಇದೇ ಸಂದರ್ಭದಲ್ಲಿ ಡಿಫೆನ್ಸ್ ಫೋರ್ಸ್ ತಂಡದ ಉಪಾಧ್ಯಕ್ಷ ರಿಝ್ವಾನ್ ಕೃಷ್ಣಾಪುರ ನೇತೃತ್ವದಲ್ಲಿ ಸುರತ್ಕಲ್ ಭಾಗದ ನಿರಾಶ್ರಿತರಿಗೂ ಆಹಾರ ಕಿಟ್ ವಿತರಿಸಲಾಯಿತು.

ಎಸ್.ಎಸ್.ಎಫ್. ಉಡುಪಿ ವಿಭಾಗದ ಅಧ್ಯಕ್ಷ ಸೈಯ್ಯದ್ ಯೂಸುಫ್ ಹೂಡೆ ತಂಙಲ್ ಅವರ ದುವಾದೊಂದಿಗೆ ಚಾಲನೆ ನೀಡಲಾಯಿತು. ಡಿಫೆನ್ಸ್ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಕಟಪಾಡಿ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ರಿಲೀಫ್ ಸೆಲ್ ಅಧ್ಯಕ್ಷ ರಝಾಕ್ ಉಸ್ತಾದ್ ಉದ್ಘಾಟಿಸಿದರು.

ಡಿಫೆನ್ಸ್ ಸಮಿತಿ ಕಾರ್ಯದರ್ಶಿ ಸಿದ್ಧಿಕ್ ಸಂತೋಷನಗರ ಸ್ವಾಗತಿಸಿ, ವಂದಿಸಿದರು.

ತಂಡದ ಸದಸ್ಯರಾದ ನಾಸೀರ್ ಭದ್ರಗಿರಿ, ನಝೀರ್ ಸಾಸ್ತಾನ, ಇಮ್ತಿಯಾಜ್ ಹೊನ್ನಾಳ, ಬಿಲಾಲ್ ಮಲ್ಪೆ, ಅಪ್ನಾನ್, ಸರ್ಫರಾಜ್, ಅಲ್ತಾಫ್ ಮಲ್ಪೆ, ಸಲ್ಮಾನ್ ಮಣಿಪುರ, ಸೈಯ್ಯದ್ ಅಸ್ರಾರ್ ತಂಙಲ್, ಮಬೀನ್ ಹೊನ್ನಾಳ ಇದ್ದರ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!