Monday, July 4, 2022
Home ಸಮಾಚಾರ ಸಂಘಸಂಗತಿ ಆ್ಯಂಬುಲೆನ್ಸ್ ಕೊಡುಗೆ

ಆ್ಯಂಬುಲೆನ್ಸ್ ಕೊಡುಗೆ

ಆ್ಯಂಬುಲೆನ್ಸ್ ಕೊಡುಗೆ

ಸುದ್ದಿಕಿರಣ ವಾರ್ತೆ
ಉಡುಪಿ. ಜ. 4: ಜಿಲ್ಲಾಡಳಿತದ ಉಪಯೋಗಕ್ಕಾಗಿ 2 ಲಕ್ಷ ರೂ. ಮೌಲ್ಯದ ಆ್ಯಂಬುಲೆನ್ಸ್ ನ್ನು ಕರ್ಣಾಟಕ ಬ್ಯಾಂಕ್ ನೀಡಿದ್ದು, ಸುಸಜ್ಜಿತ ಆ್ಯಂಬುಲೆನ್ಸ್ ನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಬ್ಯಾಂಕಿನ ಮುಖ್ಯ ಪ್ರಬಂಧಕ ಮಂಜುನಾಥ ಭಟ್ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಸ್ತಾಂತರಿಸಿದರು.

ಡಿ.ಎಚ್.ಓ ಡಾ. ಸುಧೀರಚಂದ್ರ ಸೂಡ, ಡಾ. ಪ್ರಶಾಂತ್ ಭಟ್, ಡಾ. ಪ್ರೇಮಾನಂದ, ಕರ್ಣಾಟಕ ಬ್ಯಾಂಕ್ ಕೇಂದ್ರ ಕಚೇರಿ ಮುಖ್ಯ ವ್ಯವಹಾರ ಅಧಿಕಾರಿ ಗೋಕುಲದಾಸ್ ಪೈ, ಉಡುಪಿ ವಿಭಾಗದ ಎಜಿಎಂ ಗೋಪಾಲಕೃಷ್ಣ ಸಾಮಗ, ಶ್ರೀನಿವಾಸ ದೇಶಪಾಂಡೆ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!