Thursday, July 7, 2022
Home ಸಮಾಚಾರ ಸಂಘಸಂಗತಿ ಉಚಿತ ಕಾರು ವ್ಯವಸ್ಥೆಗೆ ಚಾಲನೆ

ಉಚಿತ ಕಾರು ವ್ಯವಸ್ಥೆಗೆ ಚಾಲನೆ

ಉಡುಪಿ: ಕೋವಿಡ್ ಪೀಡಿತ ಬಡವರು ಹಾಗೂ ನಿರ್ಗತಿಕರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಹಲವು ಕಾರು ಮಾಲೀಕರು ಮುಂದೆಬಂದಿದ್ದು, ಸಾರಿಗೆ ಇಲಾಖೆಯಿಂದ ವಾಹನಗಳ ಸಂಚಾರಕ್ಕೆ ಅನುಮತಿ ಪತ್ರವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ. ಪಿ. ಗಂಗಾಧರ್ ನೀಡಿದರು.

ಉಚಿತ ಆರೋಗ್ಯ ಸೇವೆ- ಸ್ವಯಂ ಸೇವಕ ಚಾಲಕ ಎಂಬ ಘೋಷವಾಕ್ಯದಡಿ 9 ಮಂದಿ ಚಾಲಕರು ವೈದ್ಯಕೀಯ ತುರ್ತು ನೆರವಿಗೆ ಉಚಿತವಾಗಿ ಕಾರುಗಳ ಸೇವೆ ನೀಡಲು ಮುಂದೆ ಬಂದಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ಹಾಗೂ ಮರಳಿ ನಿವಾಸಕ್ಕೆ ಕರೆದೊಯ್ಯುವ ಕಾರ್ಯ ಮಾಡಲಿದ್ದಾರೆ.

ಜಿಲ್ಲಾಧಿಕಾರಿ ಕೂಡಾ ಅನುಮತಿ ನೀಡಿದ್ದು, ಉಚಿತ ಸೇವೆ ಬಯಸುವವರು ದೀಪಕ್ ಕೋಟ್ಯಾನ್ 9632893328 ಅಥವಾ ಅಬ್ದುಲ್ ಲತೀಫ್ 9008300900 ಅವರನ್ನು ಸಂಪರ್ಕಿಸಬಹುದು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!