Monday, July 4, 2022
Home ಸಮಾಚಾರ ಸಂಘಸಂಗತಿ ಆಸರೆ ಚಾರಿಟೇಬಲ್ ಟ್ರಸ್ಟ್ ನಿಂದ ಉಚಿತ ವಿದ್ಯುತ್ ಸಂಪರ್ಕ

ಆಸರೆ ಚಾರಿಟೇಬಲ್ ಟ್ರಸ್ಟ್ ನಿಂದ ಉಚಿತ ವಿದ್ಯುತ್ ಸಂಪರ್ಕ

ಆಸರೆ ಚಾರಿಟೇಬಲ್ ಟ್ರಸ್ಟ್ ನಿಂದ ಉಚಿತ ವಿದ್ಯುತ್ ಸಂಪರ್ಕ

(ಸುದ್ದಿಕಿರಣ ವರದಿ)
ಉಡುಪಿ: ನಗರದ ಕಕ್ಕುಂಜೆ ವಾರ್ಡಿನ ಲಕ್ಷ್ಮಣ ದೇವಾಡಿಗ ಮತ್ತು ಮೂಡುಪೆರಂಪಳ್ಳಿ ವಾರ್ಡಿನ ಶಾಂತಿ ಎಂಬವರ ಮನೆಗಳಿಗೆ ಕಡಿಯಾಳಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವಿದ್ಯುತ್ ಸಂಪರ್ಕ ನೀಡಲಾಯಿತು.

ವಿದ್ಯುತ್ ಸಂಪರ್ಕದ ದಾನಿ, ಕಾರ್ಪೊರೇಷನ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಮಂಗಳೂರು ಉಪಾಧ್ಯಕ್ಷ ಕಾಮ್ರೇಡ್ ರಘುರಾಮ ಕೃಷ್ಣ ಬಲ್ಲಾಳ್ ಉದ್ಘಾಟಿಸಿದರು.

ಅಭ್ಯಾಗತರಾಗಿ ಯೂನಿಯನ್ ನ ಮಂಗಳೂರು ವಲಯ ಸಹಕಾರ್ಯದರ್ಶಿ ಹೆರಾಲ್ಡ್ ಡಿ’ಸೋಜ, ಉಡುಪಿ ವಲಯ ಕಾರ್ಯದರ್ಶಿ ಕಾಮ್ರೆಡ್ ನಾಗೇಶ್ ನಾಯಕ್, ಪ್ರದೇಶ ಕಾರ್ಯದರ್ಶಿ ಕಾಮ್ರೆಡ್ ಮನೋಜ್ ಕುಮಾರ್, ಕಾಮ್ರೆಡ್ ರಮೇಶ್ ಭಾಗವಹಿಸಿದ್ದರು.

ಆಸರೆ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ ರಾಘವೇಂದ್ರ ಕಿಣಿ ಸ್ವಾಗತಿಸಿ, ಟ್ರಸ್ಟ್ ಕೋಶಧಿಕಾರಿ ಸತೀಶ್ ಕುಲಾಲ್ ವಂದಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರಿಧರ ಆಚಾರ್ಯ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಕಿಶೋರ್ ಕರಂಬಳ್ಳಿ ಮತ್ತು ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಸದಸ್ಯರಾದ ರಾಕೇಶ್ ಜೋಗಿ ಇದ್ದರು.

ಎರಡೂ ಮನೆಗಳ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಮಹಿಷಮರ್ದಿನಿ ಎಲೆಕ್ಟ್ರಿಕನ್ಸ್ ನ ಅಶ್ವತ್ಥ ದೇವಾಡಿಗ ನಿರ್ವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!