Monday, July 4, 2022
Home ಸಮಾಚಾರ ಸಂಘಸಂಗತಿ ವಿಶಿಷ್ಟ ರೀತಿಯಲ್ಲಿ ಕಾರ್ಮಿಕರ ದಿನಾಚರಣೆ

ವಿಶಿಷ್ಟ ರೀತಿಯಲ್ಲಿ ಕಾರ್ಮಿಕರ ದಿನಾಚರಣೆ

ಉಡುಪಿ: ಹೋಮ್ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ವಿಶಿಷ್ಟ ರೀತಿಯಲ್ಲಿ ಕಾರ್ಮಿಕರ ದಿನ ಆಚರಿಸಲಾಯಿತು.

ಲಾಕ್ ಡೌನ್ ನಿಂದ ತೀರಾ ಸಂಕಷ್ಟದಲ್ಲಿದ್ದ ರೋಗಿಗಳು, ಅಸಹಾಯಕರು, ಒಂಟಿ ವೃದ್ಧರಿರುವ ಅಸಹಾಯಕ ಕಾರ್ಮಿಕರಿಗೆ ನಾವಿದ್ದೇವೆ ನಿಮ್ಮ ಜೊತೆ ಎಂದು ಧೈರ್ಯ ನೀಡುವ ಮೂಲಕ ಅವರಿಗೆ ಸಹಾಯಧನ, ಅಕ್ಕಿ ಮತ್ತಿತರ ವಸ್ತುಗಳನ್ನು ನೀಡಲಾಯಿತು. ಅಲ್ಲದೆ, ಓರ್ವ ಬಡ ಕಾರ್ಮಿಕ ರೋಗಿಗೆ ವಾಟರ್ ಬೆಡ್ ನೀಡಲಾಯಿತು.

ಪೇತ್ರಿ, ಚೇರ್ಕಾಡಿ, ಕರಂಬಳ್ಳಿ, ದೊಡ್ಡಣಗುಡ್ಡೆ, ಉಡುಪಿ ಮತ್ತು ಮಣಿಪಾಲದ 10 ಬಡ ಕಾರ್ಮಿಕ ಕುಟುಂಬಗಳಿಗೆ ನೆರವು ನೀಡಲಾಯಿತು.

ಈ ಸಂದರ್ಭದಲ್ಲಿ ಹೋಮ್ ಡಾಕ್ಟರ್ ತಂಡದ ಸದಸ್ಯರಾದ ಡಾ. ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಸವಿತಾ ಶೆಟ್ಟಿ, ರಾಘವೇಂದ್ರ ಪ್ರಭು ಕರ್ವಾಲು, ದಿನಕರ ಶೆಟ್ಟಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!