ಮಲ್ಪೆ: ಕೊಡವೂರು ಬ್ರಾಹ್ಮಣ ಮಹಾಸಭಾ ರಜತೋತ್ಸವ ಅಂಗವಾಗಿ ನಡೆಯುತ್ತಿರುವ ರಜತ ಪಥದಲ್ಲಿ ವಿಪ್ರ ಹೆಜ್ಜೆ ಸರಣಿಯ 4ನೇ ಕಾರ್ಯಕ್ರಮವಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿತ್ಯ ಜೀವನದ ಆಹಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳುವಲ್ಲಿ ಅಸಹಾಯಕರಾದ ವಲಯದ ಸುಮಾರು 50 ಬ್ರಾಹ್ಮಣ ಕುಟುಂಬಗಳಿಗೆ ದಾನಿಗಳ ಸಹಕಾರದೊಂದಿಗೆ ಪ್ರತೀ ಕುಟುಂಬಕ್ಕೆ ತಲಾ 2 ಸಾವಿರ ರೂ. ಮೌಲ್ಯದ ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ, ಎಣ್ಣೆ ಇತ್ಯಾದಿ 13 ಬಗೆಯ ದಿನನಿತ್ಯ ಬಳಕೆಯ ದವಸ ಧಾನ್ಯಗಳನ್ನೊಳಗೊಂಡ ಕಿಟ್ ನ್ನು ಈಚೆಗೆ ಫಲಾನುಭವಿಗಳ ಮನೆಗಳಿಗೇ ತೆರಳಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಜತೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಭಟ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರಾವ್, ಉಪಾಧ್ಯಕ್ಷರಾದ ಶ್ರೀಶ ಭಟ್, ಸುರೇಶ್ ಭಟ್ ಮತ್ತು ಶ್ರೀನಿವಾಸ ಉಪಾಧ್ಯ, ಕಾರ್ಯದರ್ಶಿಗಳಾದ ಶ್ರೀನಿವಾಸ ಬಾಯರಿ ಮತ್ತು ಮುರಳೀಧರ ಕೊಡವೂರು, ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ಪ್ರಚಾರ ಸಮಿತಿಯ ಪ್ರಸನ್ನ ಕೊಡವೂರು ಮೊದಲಾದವರಿದ್ದರು.