Monday, July 4, 2022
Home ಸಮಾಚಾರ ಸಂಘಸಂಗತಿ ಕೊಡವೂರು ಬ್ರಾಹ್ಮಣ ಮಹಾಸಭಾ ರಜತ ಸಂಭ್ರಮ

ಕೊಡವೂರು ಬ್ರಾಹ್ಮಣ ಮಹಾಸಭಾ ರಜತ ಸಂಭ್ರಮ

ಉಡುಪಿ: ಕೊಡವೂರು ಬ್ರಾಹ್ಮಣ ಮಹಾಸಭಾ 25 ಸಾರ್ಥಕ ಸಂವತ್ಸರ ಪೂರೈಸಲಿದ್ದು, ಈ ವರ್ಷದ ಏಪ್ರಿಲ್ ನಿಂದ ಮುಂದಿನ ವರ್ಷದ ಏಪ್ರಿಲ್ ವರೆಗೆ ಒಂದು ವರ್ಷ ಕಾಲ ರಜತ ಪಥದಲ್ಲಿ ವಿಪ್ರ ನಡಿಗೆ ಶಿರೋನಾಮೆಯಡಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶಾಶ್ವತ ಕಾರ್ಯಕ್ರಮಗಳೊಂದಿಗೆ ರಜತ ಮಹೋತ್ಸವ ಆಚರಿಸಲಾಗುವುದು.

ಸೌರಮಾನ ಯುಗಾದಿ ಶುಭದಿನ ಏ. 14ರಂದು ವರ್ಷಪೂರ್ತಿ ಕಾರ್ಯಕ್ರಮಗಳಿಗೆ ಕೊಡವೂರು ವಿಪ್ರಶ್ರೀ ಕಲಾಭವನದಲ್ಲಿ ಚಾಲನೆ ನೀಡಲಾಗುವುದು.

ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು 25 ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದು, ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯದ ಕ್ಷೇತ್ರಾಧಿಕಾರಿ ಭೀಮೇಶ್ವರ ಜೋಶಿ, ಕರ್ಣಾಟಕ ಬ್ಯಾಂಕ್ ಡಿಜಿಎಂ ಬಿ. ಗೋಪಾಲಕೃಷ್ಣ ಸಾಮಗ ಹಾಗೂ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯ ಅಭ್ಯಾಗತರಾಗಿ ಆಗಮಿಸುವರು.

ಇದೇ ಸಂದರ್ಭದಲ್ಲಿ ಖ್ಯಾತ ಭಾಷಾ ವಿಜ್ಞಾನಿ ಹಾಗೂ ಕಂಪ್ಯೂಟರ್ ಕನ್ನಡ ಕೀಲಿಮಣೆ ವಿನ್ಯಾಸಗಾರ ಪ್ರೊ. ಕೆ. ಪಿ. ರಾವ್ ಅವರಿಗೆ ವಿಪ್ರ ಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೊಡವೂರು ಬ್ರಾಹ್ಮಣ ಮಹಾಸಭಾ ಆರಂಭಿಸಲು ಕಳೆದ 24 ವರ್ಷದ ಹಿಂದೆ ಮಾರ್ಗದರ್ಶನ ನೀಡಿದ ಹರಿದಾಸ ಉಪಾಧ್ಯಾಯ ಮತ್ತು ಜಯರಾಮ ರಾವ್ ಹಾಗೂ ಕೊಡವೂರು ಬ್ರಾಹ್ಮಣ ಮಹಾಸಭಾ ಸ್ಥಾಪಕ ಕಾರ್ಯದರ್ಶಿ ಗೋವಿಂದ ಐತಾಳ ಅವರನ್ನು ಗೌರವಿಸಲಾಗುವುದು.

ಅಂದು ಬೆಳಿಗ್ಗೆ 108 ಕಾಯಿ ಗಣಹೋಮ ಹಾಗೂ ಗೋಪೂಜೆ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ನಡೆಯಲಿದೆ ಎಂದು ರಜತೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!