Sunday, July 3, 2022
Home ಸಮಾಚಾರ ಸಂಘಸಂಗತಿ ಗದ್ದೆಗಿಳಿದು ಕಳೆ ಕಿತ್ತ ಪ್ರಾಂಶುಪಾಲರು, ಉಪನ್ಯಾಸಕರು

ಗದ್ದೆಗಿಳಿದು ಕಳೆ ಕಿತ್ತ ಪ್ರಾಂಶುಪಾಲರು, ಉಪನ್ಯಾಸಕರು

ಉಡುಪಿ: ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ| ಗಣನಾಥ ಎಕ್ಕಾರು ಸಹಿತ ಕಾಲೇಜಿನ 16 ಮಂದಿ ಉಪನ್ಯಾಸಕರು ಮಂಗಳವಾರ ಕುತ್ಪಾಡಿಯಲ್ಲಿ ಗದ್ದೆಗಿಳಿದು ಕಳೆ ಕೀಳುವ ಕಾರ್ಯ ನಡೆಸಿದರು.

ಶಾಸಕ ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ 1,500 ಎಕ್ರೆ ಹಡಿಲು ಭೂಮಿಯಲ್ಲಿ ಕೃಷಿ ಕಾರ್ಯ ಕೈಗೊಂಡಿದೆ. ಪರಿಸರದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಅವರಿಗೆ ತರಬೇತಿ ನೀಡುವುದರೊಂದಿಗೆ ಕೃಷಿ ಕಾರ್ಯ ಕೈಗೊಳ್ಳುತ್ತಿದೆ.

ಅದರ ಅಂಗವಾಗಿ ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ 60 ಮಂದಿ ವಿದ್ಯಾರ್ಥಿಗಳು ಕಳೆ ಕೀಳುವ ಕಾರ್ಯ ನಡೆಸಿದರು.

ಉಪನ್ಯಾಸಕರು ಗದ್ದೆಗಿಳಿದು ಕೆಲಸ ಮಾಡಿದ್ದು ಪರಿಸರದ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಶಾಸಕ ಕೆ. ರಘುಪತಿ ಭಟ್, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ವಿದ್ಯಾರ್ಥಿ ಸಮೂಹ ಕೃಷಿ ಬಗ್ಗೆ ಗಮನ ನೀಡಬೇಕು ಎಂಬ ಸಂದೇಶ ನೀಡಿದೆ. ಹೊಸ ಶಿಕ್ಷಣ ನೀತಿಯಲ್ಲಿರುವಂತೆ ಸಮುದಾಯದೊಂದಿಗೆ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಇಂಥ ಚಟುವಟಿಕೆಗಳು ಪೂರಕ ಎಂದು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಸಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಿನಕರಬಾಬು, ರಂಗ ಕಲಾವಿದ ಪ್ರದೀಪ್ ಚಂದ್ರ ಕುತ್ಪಾಡಿ, ಸಂಘಟಕ ಮುರಳಿ ಕಡೆಕಾರ್ ಇದ್ದರು.

ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸುಮಾರು 1 ಎಕ್ರೆ ಪ್ರದೇಶದ ಗದ್ದೆಯಲ್ಲಿ ಕಳೆ ಕೀಳುವ ಕಾರ್ಯ ನಡೆಸಿದರು.

ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್ ಕಾರ್ಯಕ್ರಮ ಸಂಘಟಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!