Saturday, July 2, 2022
Home ಸಮಾಚಾರ ಸಂಘಸಂಗತಿ ಗಾಲಿಕುರ್ಚಿ ಹಸ್ತಾಂತರ

ಗಾಲಿಕುರ್ಚಿ ಹಸ್ತಾಂತರ

ಉಡುಪಿ: ಬೆನ್ನು ಮೂಳೆ ಮುರಿತಕ್ಕೊಳಗಾದವರಿಗೆ ನೆರವು ನೀಡುತ್ತಿರುವ ದಿವ್ಯಾಂಗ ರಕ್ಷಣಾ ಸಮಿತಿಗೆ ಇಲ್ಲಿನ ಲೆಕ್ಕ ಪರಿಶೋಧಕರ ಸಂಸ್ಥೆ ಕುಂಜಿಬೆಟ್ಟು ವತಿಯಿಂದ 73ನೇ ಸಿಎ ದಿನಾಚರಣೆ ಸಂದರ್ಭದಲ್ಲಿ ಗಾಲಿ ಕುರ್ಚಿಯನ್ನು ಸಮಿತಿ ಮುಖ್ಯಸ್ಥ, ನಗರಸಭಾ ಸದಸ್ಯ ವಿಜಯ್ ಕೊಡವೂರು ಅವರಿಗೆ ಹಸ್ತಾಂತರಿಸಲಾಯಿತು.

ಲೆಕ್ಕ ಪರಿಶೋಧಕರ ಸಂಘ ಅಧ್ಯಕ್ಷೆ ಕವಿತಾ ಪೈ ಹಸ್ತಾಂತರಿಸಿದರು.

ಸೇವಾ ಭಾರತಿ ಕನ್ಯಾಡಿ ಸಡೆಸುತ್ತಿರುವ ದಿವ್ಯಾಂಗ ರಕ್ಷಣಾ ಸಮಿತಿ ಉಡುಪಿ ಜಿಲ್ಲೆಯ ಸುಮಾರು 60 ಮಂದಿಗೆ ದಾನಿಗಳ ಮೂಲಕ ಉಚಿತ ಚಿಕಿತ್ಸೆ ಹಾಗೂ ತರಬೇತಿ ನೀಡುತ್ತಿದೆ.

ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರ ಸಂಘ ಕಾರ್ಯದರ್ಶಿ ಪ್ರದೀಪ್ ಜೋಗಿ, ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್, ಲೋಕೇಶ್ ಶೆಟ್ಟಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!