Monday, July 4, 2022
Home ಸಮಾಚಾರ ಸಂಘಸಂಗತಿ ರೆಡ್ ಕ್ರಾಸ್ ವತಿಯಿಂದ ಗಾಲಿ ಕುರ್ಚಿ ಕೊಡುಗೆ

ರೆಡ್ ಕ್ರಾಸ್ ವತಿಯಿಂದ ಗಾಲಿ ಕುರ್ಚಿ ಕೊಡುಗೆ

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಸಾಯಿರಾಧ ಪ್ಯಾಲೇಸ್ ನಿವಾಸಿ ಚಿತ್ತರಂಜನದಾಸ್ ಹೆಗ್ಡೆ ಕೊಡುಗೆಯಾಗಿ ನೀಡಿದ ಗಾಲಿ ಕುರ್ಚಿಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಫಲಾನುಭವಿ ಮಲ್ಪೆಯ ಚೆನ್ನಪ್ಪ ಅವರ ಪುತ್ರ ಸಂದೀಪ್ ಅವರಿಗೆ ಹಸ್ತಾಂತರಿಸಿದರು.

ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಪ್ರಮೋದ್ ಕುಮಾರ್ ಮಾರ್ಗದರ್ಶನದಲ್ಲಿ ಈ ಗಾಲಿ ಕುರ್ಚಿ ನೀಡಲಾಗುತ್ತಿದ್ದು, ಸರ್ಕಾರದ ಅನುದಾನದ ಕೊರತೆ ಹಿನ್ನೆಲೆಯಲ್ಲಿ ಚಿತ್ತರಂಜನದಾಸ್ ಹೆಗ್ಡೆಯಂಥ ದಾನಿಗಳು ಮುಂದೆಬಂದು ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ., ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಗೌರವ ಖಜಾಂಚಿ ಡಾ. ಅರವಿಂದ ನಾಯಕ್ ಅಮ್ಮುಂಜೆ, ಡಿಡಿಆರ್.ಸಿ ಕಾರ್ಯದರ್ಶಿ ಕೆ. ಸನ್ಮತ್ ಹೆಗ್ಡೆ, ರೆಡ್ ಕ್ರಾಸ್ ಸದಸ್ಯ ಕಿಶನ್ ಹೆಗ್ಡೆ ಕೊಳ್ಕೆಬೈಲ್, ರೆಡ್ ಕ್ರಾಸ್ ಸಿಬ್ಬಂದಿ ಸುನಿತಾ, ಡಿಡಿಆರ್.ಸಿ ಸಿಬ್ಬಂದಿ ಅನುಷಾ ಆಚಾರ್ಯ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!