Monday, July 4, 2022
Home ಸಮಾಚಾರ ಸಂಘಸಂಗತಿ ಗೋವಿಗಾಗಿ ಮೇವು ಅಭಿಯಾನ

ಗೋವಿಗಾಗಿ ಮೇವು ಅಭಿಯಾನ

ಬ್ರಹ್ಮಾವರ: ಪೇಜಾವರ ಮಠದ ನೀಲಾವರ ಗೋಶಾಲೆಗೆ ಮಂದರ್ತಿ ಕಾಮಧೇನು ಗೋಸೇವಾ ಬಳಗ ಹಾಗೂ ಕರಂಬಳ್ಳಿ ಯುವಕ ಮಂಡಲ ವತಿಯಿಂದ ಗೋವಿಗಾಗಿ ಮೇವು ಅಭಿಯಾನ ನಡೆಸಲಾಯಿತು

.
ಗೋಗ್ರಾಸ ಸ್ವೀಕರಿಸಿ ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಗೋವಿಗಾಗಿ ಮೇವು ಅಭಿಯಾನ ಉಡುಪಿ ಜಿಲ್ಲೆ ಮಾತ್ರವಲ್ಲದೆ, ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಯಶಸ್ವಿಯಾಗಿರುವುದು ಅಭಿನಂದನೀಯ. ಗೋವಿಗೆ ಪ್ರತಿಯೊಬ್ಬರೂ ಗೋಗ್ರಾಸ ನೀಡಿದಲ್ಲಿ ಅದು ಪುಣ್ಯ ಸಂಪಾದನೆಯ ಕೆಲಸವಾಗುತ್ತದೆ. ಪ್ರತೀ ಗ್ರಾಮದಲ್ಲಿ ಗೋ ಶಾಲೆ ಪ್ರಾರಂಭವಾದರೆ ದನಗಳ ಸಂತತಿ ಮುಂದಿನ ದಿನಗಳಲ್ಲಿ ಉಳಿಸಬಹುದು ಎಂದರು.
ಅಭಿಯಾನದ ಪ್ರಮುಖ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ, ಅಭಿಯಾನ ನಡೆದು ಬಂದ ಹಾದಿಯನ್ನು ತಿಳಿಸಿದರು. ಮುಂದಿನ ದಿನಗಳಲ್ಲಿ ಒಣ ಹುಲ್ಲು ನೀಡುವ ಕಾರ್ಯ ವಿವಿಧ ಸಂಘಸಂಸ್ಥೆಗಳ ವತಿಯಿಂದ ನಿರಂತರ ನಡೆಯಲಿದೆ ಎಂದರು.
ನಗರಸಭಾ ಸದಸ್ಯ ಕೆ. ಗಿರಿಧರ್ ಆಚಾರ್ಯ, ರಾಘವೇಂದ್ರ ಕರ್ವಾಲು, ಸಂಘದ ಪ್ರಸನ್ನ ಶೆಟ್ಟಿ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!