Thursday, July 7, 2022
Home ಸಮಾಚಾರ ಸಂಘಸಂಗತಿ ಗೋಶಾಲೆಗೆ ಬೈಹುಲ್ಲು ಸಮರ್ಪಣೆ

ಗೋಶಾಲೆಗೆ ಬೈಹುಲ್ಲು ಸಮರ್ಪಣೆ

ಕಾಪು: ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಶಿರ್ವ ವಲಯ ವತಿಯಿಂದ ಗೋಶಾಲೆಗಾಗಿ ಬೈಹುಲ್ಲು ಸಂಗ್ರಹ ಅಭಿಯಾನವನ್ನು ಒಂದು ವಾರ ನಡೆಸಿ ಸುಮಾರು 325 ಕಟ್ಟು ಬೈಹುಲ್ಲು ಸಂಗ್ರಹಿಸಿ ನೀಲಾವರ ಗೋಶಾಲೆಗೆ ಸಾಗಿಸಲು ಹಿರಿಯ ಹಿಂದೂ ನೇತಾರ ಬೆಳ್ಳೆಅಂಗಡಿ ಸದಾನಂದ ಶೆಣೈ ಹಾಗೂ ವಿಶ್ವ ಹಿಂದೂ ಪರಿಷತ್ ಶಿರ್ವ ವಲಯ ಗೌರವಾಧ್ಯಕ್ಷ ಬೆಳ್ಳೆ ಮಧ್ವರಾಜ ಭಟ್ ಚಾಲನೆ ನೀಡಿದರು.
ಪ್ರತಿಯೊಬ್ಬರೂ ಸೂರ್ಯೋದಯ ಕಾಲದಲ್ಲಿ ಎದ್ದು ಪ್ರತಿಯೊಬ್ಬ 8 ಶುಭ ವಸ್ತುಗಳ ದರ್ಶನ ಮಾಡಬೇಕು. ಅದರಲ್ಲಿ ಮೊದಲು ಗೋವಿನ ದರ್ಶನ ಮಾಡಬೇಕೆಂದು ಶಾಸ್ತ್ರ ತಿಳಿಸಿದೆ. ಪ್ರಸ್ತುತ ಹೆಚ್ಚಿನವರು 3ರಿಂದ 10 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿರುವುದರಿದ ಪ್ರತೀ ಮನೆಯವರಿಗೆ ಗೋವು ಸಾಕಲು, ದರ್ಶನ ಮಾಡಲು ಕಷ್ಟ ಸಾಧ್ಯ. ಹಿಂದೂವಾದವನು ಗೋಸೇವೆ ಮಾಡಲೇಬೇಕು. ಸಾಕಲು ಆಗದಿದ್ದರೂ ಸಾಕುವವರಿಗೆ ಪ್ರೋತ್ಸಾಹ ನೀಡುವುದು, ಗೋಗ್ರಾಸ ನೀಡುವುದು ಇತ್ಯಾದಿಯನ್ನೂ ಮಾಡಬಹುದು.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನೀಲಾವರದಲ್ಲಿ ಸಾವಿರಾರು ಅನಾಥ ಗೋವುಗಳನ್ನು ಸಾಕಲು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಅವರೊಂದಿಗೆ ನಾವು ಕೈಜೋಡಿಸಿ ಅಳಿಲುಸೇವೆ ಮಾಡುವುದು ನಮಗೆ ಸಿಕ್ಕಿರುವ ದೊಡ್ಡ ಅವಕಾಶ. ಅದನ್ನು ಸದುಪಯೋಗ ಮಾಡಿಕೊಂಡು ನಿರಂತರವಾಗಿ ಸಮಾಜ, ಗೋವಿಗಾಗಿ ಇಂಥ ಕೆಲಸ ಮಾಡಲು ತೊಡಿಗಿಕೊಳ್ಳೋಣ ಎಂದು ಬೆಳ್ಳೆ ಮಧ್ವರಾಜ ಭಟ್ ಹೇಳಿದರು.
ಅವಿನಾಶ ಆಚಾರ್ಯ ಸ್ವಾಗತಿಸಿ, ವಿಶ್ವ ಹಿಂದೂ ಪರಿಷತ್ ಶಿರ್ವ ವಲಯ ಅಧ್ಯಕ್ಷ ಬೆಳ್ಳೆ ವಿಶ್ವನಾಥ ಶೆಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು, ಧರ್ಮಪ್ರಚಾರ ಪ್ರಮುಖ್ ರಾಘವೇಂದ್ರ ಶೆಟ್ಟಿ, ಸುರಕ್ಷಾ ಪ್ರಮುಖ್ ಆನಂದ, ವಿಶ್ವ ಹಿಂದೂ ಪರಿಷತ್ ಶಿರ್ವ ವಲಯ ಗೌರವಾಧ್ಯಕ್ಷ ನಾಗರಾಜ ಭಟ್, ರಾಷ್ಟ್ರಿಯ ಸ್ವಯಂ ಸೇವಾ ಸಂಘದ ಸೇವಾ ಪ್ರಮುಖ್ ಸುಬ್ರಹ್ಮಣ್ಯ ವಾಗ್ಲೆ ಹಾಗೂ ಊರಿನ ಹಿರಿಯರಾದ ಪಟೇಲ್ ಮನೆ ದಯಾನಂದ ಶೆಟ್ಟಿ, ಭಟ್ರ ಮನೆ ಪುಂಡರೀಕಾಕ್ಷ ಭಟ್, ದೊಡ್ಡಮನೆ ಅಶೋಕ ಶೆಟ್ಟಿ ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮಟ್ಟಾರು, ಮೂಡುಬೆಳ್ಳೆ, ಬಂಟಕಲ್ಲು, ಎಡ್ಮರ್, ಶಿರ್ವ, ಪಡುಬೆಳ್ಳೆ ಘಟಕದ ಅಧ್ಯಕ್ಷರು, ಗೋಪ್ರಮುಖ್, ಪದಾಧಿಕಾರಿಗಳು, ಗ್ರಾಮದ ಪ್ರಮುಖರು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!