Thursday, July 7, 2022
Home ಸಮಾಚಾರ ಸಂಘಸಂಗತಿ ಜಮಾಅತ್ ಚಟುವಟಿಕೆ ಇತರರಿಗೆ ಮಾದರಿ

ಜಮಾಅತ್ ಚಟುವಟಿಕೆ ಇತರರಿಗೆ ಮಾದರಿ

ಕಾಪು: ಆರ್ಥಿಕವಾಗಿ ತೀರಾ ದುರ್ಬಲರಾದವರ ಅಗತ್ಯದ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಬೆಳಪು ಗ್ರಾಮದಲ್ಲಿ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟ ಜಮಾಅತೆ ಇಸ್ಲಾಮೀ ಹಿಂದ್ ಕೆಲಸ ಇತರರಿಗೆ ಮಾದರಿ ಎಂದು ಬೆಳಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಬೆಳಪು ಗ್ರಾಮದ ದೇವೇಗೌಡ ಬಡಾವಣೆಯಲ್ಲಿ ರಹಮತ್ ಎಂಬವರಿಗೆ ಮನೆ ಹಸ್ತಾಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು.

ಮತ್ತೋರ್ವ ಅತಿಥಿ ಲೀಲಾಧರ ಶೆಟ್ಟಿ, ಯಾವುದೇ ತಾರತಮ್ಯ ಇಟ್ಟುಕೊಳ್ಳದೆ ಸಮಾಜದ ಎಲ್ಲಾ ವರ್ಗದವರಿಗೆ ಸಹಾಯಹಸ್ತ ಜಮಾಅತೆ ಇಸ್ಲಾಮೀ ಹಿಂದ್ ನೀಡುತ್ತಿದೆ ಎಂದು ಪ್ರಶಂಸಿಸಿದರು.

ಉದ್ಯಮಿ ಎಸ್. ಕೆ. ಇಕ್ಬಾಲ್, ಪರೋಪಕಾರ ಪುಣ್ಯಪ್ರದ ಕಾರ್ಯ ಎಂದರು. ಜನಾಬ್ ಶಬೀ ಅಹಮದ್ ಖಾಝಿ, ಜಮಾಅತೆ ಇಸ್ಲಾಮೀ ಹಿಂದ್, ಸಮಾಜದ ಸಮಸ್ಯೆ ಬಗೆಹರಿಸುವಲ್ಲಿ ಶ್ರಮಿಸುತ್ತಿದೆ ಎಂದರು.

ಮನೆ ಉದ್ಘಾಟಿಸಿ. ಕೀಲಿ ಕೈ ಹಸ್ತಾಂತರಿಸಿದ, ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಶಾಖೆ ಅಧ್ಯಕ್ಷ ಡಾ| ಅಬ್ದುಲ್ ಅಜೀಜ್, ಕುರಾನ್ ಸಂದೇಶದಂತೆ ಮನುಷ್ಯ ಪರೋಪಕಾರಿಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಂಚಾಲಕ ಜನಾಬ್ ಶಬ್ಬೀರ್ ಮಲ್ಪೆ, ಸಮಾಜದಲ್ಲಿರುವ ಅಸಹಾಯಕ ಬಡ ನಿರ್ಗತಿಕರ ಬಗ್ಗೆಯೂ ಗಮನಹರಿಸಬೇಕು ಎಂದರು.

ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಜಮಾಅತೆ ಇಸ್ಲಾಮೀ ಹಿಂದ್ ನ ಧ್ಯೇಯ, ಧೋರಣೆ ಹಾಗೂ ಚಟುವಟಿಕೆಗಳನ್ನು ಪರಿಚಯಿಸಿದರು.

ಮೌ| ಮುಹಮ್ಮದ್ ಪರೇಜ್ ಆಲಂ ನದ್ವಿ ಕುರಾನ್ ಪಠಿಸಿದರು. ಮುಹಮ್ಮದ್ ಇಕ್ಬಾಲ್ ಆದಂ ವಂದಿಸಿದರು. ನಿಸಾರ್ ಅಹಮದ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!