Thursday, July 7, 2022
Home ಸಮಾಚಾರ ಸಂಘಸಂಗತಿ ಜಾನಪದ ಕಲಾವಿದರಿಗೆ ನೆರವು

ಜಾನಪದ ಕಲಾವಿದರಿಗೆ ನೆರವು

ಉಡುಪಿ: ಜನಪದ ನಂಬಿಕೆ, ಆಚಾರ ವಿಚಾರಗಳನ್ನು ಪ್ರತಿಬಿಂಬಿಸುವ ಮೂಲಕ ಜೀವಂತವಾಗಿಡುವ ಜಾನಪದ ಕಲಾವಿದರು ಕಲೆಯನ್ನೇ ನಂಬಿ ಬದುಕುವವರು. ಆದರೆ, ಕಳೆದ ಒಂದೂವರೆ ವರ್ಷದಿಂದ ಕೊರೊನಾ ಲಾಕ್ ಡೌನ್ನಿಂದಾಗಿ ತತ್ತರಿಸಿ ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಸಹೃದಯಿ ಸಮಾಜದ ಸಹಾಯ ಹಸ್ತ ಅವರನ್ನು ಸಂಕಟದ ಕೂಪದಿಂದ ಪಾರು ಮಾಡುವುದು ಅಗತ್ಯ. ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ ಹಿರಿಯ ಉದ್ಯಮಿ, ಕಲಾವಿದ ಸಮಾಜಸೇವಕ ಡಾ| ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದಲ್ಲಿ ಈ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದೆ. ಕಳೆದ ಬಾರಿ ಸುಮಾರು 100 ಮಂದಿ ಕಲಾವಿದರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದ್ದರೆ, ಈ ಬಾರಿ 200ಕ್ಕೂ ಅಧಿಕ ಜಾನಪದ ಕಲಾವಿದರಿಗೆ ನೆರವಿನ ಹಸ್ತ ಚಾಚಲಾಗಿದೆ.

ಅಂಜಾರು ಶ್ರೀ ದುರ್ಗಾಪರಮೇಶ್ವರಿ ಜಾನಪದ ಕಲಾಸಂಘ, ಕಲಾರಂಗ ಕಾರ್ಕಳ, ಕರ್ನಾಟಕ ಜಾನಪದ ಪರಿಷತ್ತು ಕಾಪು ತಾಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಅರ್ಹ ಕಲಾವಿದರನ್ನು ಗುರುತಿಸಿ ಕಿಟ್ ವಿತರಿಸಲಾಯಿತು.

ಜಿಲ್ಲಾ ಗೌರವಾಧ್ಯಕ್ಷ ಶ್ರೀಧರ ಡಿ. ಶೇಣವ, ಕಾರ್ಯದರ್ಶಿ ರವಿರಾಜ ನಾಯಕ್, ಖಜಾಂಚಿ ಸಾಲಿಗ್ರಾಮ ಜಯರಾಮ ಆಚಾರ್ಯ, ಕಾಪು ತಾಲೂಕು ಘಟಕ ಗೌರವಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಅಧ್ಯಕ್ಷ ಲೀಲಾಧರ ಶೆಟ್ಟಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟೇಶ್ ನಾಯ್ಕ್ ಮರಾಠಿ, ಕಲಾರಂಗ ಕಾರ್ಕಳದ ಚಂದ್ರಹಾಸ ಸುವರ್ಣ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!