Thursday, July 7, 2022
Home ಸಮಾಚಾರ ಸಂಘಸಂಗತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಗಡು ಮಾಡು ರಚನೆ

ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಗಡು ಮಾಡು ರಚನೆ

ಬ್ರಹ್ಮಾವರ: ಮಳೆಗಾಲ ಸಂದರ್ಭದಲ್ಲಿ ಕೋವಿಡ್ ಲಸಿಕೆ ಪಡೆಯಲು ಆಗಮಿಸುವ ಸಾರ್ವಜನಿಕರಿಗೆ ಸಂಭವಿಸುವ ತೊಂದರೆಯನ್ನು ಗಮನಿಸಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬ್ರಹ್ಮಾವರ ಫೌಂಡೇಶನ್ ವತಿಯಿಂದ ಸುಮಾರು 60 ಸಾವಿರ ರೂ. ವೆಚ್ಚದಲ್ಲಿ ಶಾಶ್ವತ ತಗಡು ಮಾಡು ನಿರ್ಮಿಸಿ ಹಸ್ತಾಂತರಿಸಲಾಯಿತು.

ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಜಿತ್ ಕುಮಾರ್ ಶೆಟ್ಟಿ ಅವರಿಗೆ ಬ್ರಹ್ಮಾವರ ಫೌಂಡೇಶನ್ ಆಡಳಿತ ವಿಶ್ವಸ್ಥ ಬಿ. ಗೋವಿಂದರಾಜ್ ಹೆಗ್ಡೆ ಹಸ್ತಾಂತರಿಸಿದರು.

ಕೇಂದ್ರದ ವೈದ್ಯರಾದ ಡಾ. ಮಹಾಬಲ, ಡಾ. ಮಹೇಶ ಐತಾಳ ಹಾಗೂ ಶಶಿಕಲಾ ಜಿ. ಹೆಗ್ಡೆ, ಪ್ರತೀಕ್ ಹೆಗ್ಡೆ, ಡೆರಿಕ್ ಡಿ’ಸೋಜಾ, ದೇವಕಿ ಪೂಜಾರಿ, ಸ್ಟಾನಿ ವಾಜ್, ಜೇಮ್ಸ್ ಡಿ’ಸಿಲ್ವ, ಅಶೋಕ್ ಸಾಲ್ಯಾನ್,ಸಂಜೀವ, ಶಿವದಾಸ, ಜಗದೀಶ ಶೆಟ್ಟಿಗಾರ್ ಮೊದಲಾದವರಿದ್ದರು.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಶ್ವತ ತಗಡು ಮಾಡು ರಚನೆ ಬಗ್ಗೆ ಆಡಳಿತ ವೈದ್ಯಾಧಿಕಾರಿ ಸಹಿತ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!